ಲಂಡನ್ : ಲಂಡನ್ನ ರಸ್ತೆಯಲ್ಲಿ ಪಾನ್ ಜಗಿದು ಉಗುಳಿದ ಭಾರತ ಮೂಲದ ಇಬ್ಬರು ವ್ಯಕ್ತಿಗಳಿಗೆ ವಾಯುವ್ಯ ಲಂಡನ್ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಭಾರೀ ದಂಡ ವಿಧಿಸಿದೆ.
ಮೊದಲ ಪ್ರಕರಣದಲ್ಲಿ, ಎಡ್ಗ್ವೇರ್ ನಿವಾಸಿ ಅಕ್ಷಿತ್ಕುಮಾರ್ ಭದ್ರೆ ಪಟೇಲ್ ಜೂನ್ 11, 2025ರಂದು ಅವರು ಕಿಂಗ್ಸ್ಬರಿಯ ರಸ್ತೆಯಲ್ಲಿ ಪಾನ್ ಉಗುಳಿದ್ದರು. ಈ ಹಿನ್ನೆಲೆ ಅವರಿಗೆ ಈ ತಿಂಗಳ ಆರಂಭದಲ್ಲಿ ವಾಯುವ್ಯ ಲಂಡನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 100 ಯೂರೋ ದಂಡ ವಿಧಿಸಿತ್ತು. ಅವರು ದಂಡ ಪಾವತಿಸದೆ, ವಿಚಾರಣೆ ವೇಳೆ ನ್ಯಾಯಾಲಯಕ್ಕೂ ಅವರು ಹಾಜರಾಗಿರಲಿಲ್ಲ. ಬಳಿಕ ನ್ಯಾಯಾಲಯ ಅವರಿಗೆ 1,391 ಯುರೋ (1.7 ಲಕ್ಷ ರೂ.) ದಂಡ ವಿಧಿಸಿ ಆದೇಶಿಸಿದೆ.
ಇದೇ ರೀತಿಯ ಪ್ರತ್ಯೇಕ ಪ್ರಕರಣದಲ್ಲಿ, ರುಯಿಸ್ಲಿಪ್ನ ವಾಸಿ ಹಿತೇಶ್ ಪಟೇಲ್ ಅವರಿಗೂ ನ್ಯಾಯಾಲಯವು 1,391 ಯುರೋ (1.7 ಲಕ್ಷ ರೂ.) ದಂಡ ವಿಧಿಸಿದೆ. ಜೂನ್ 12, 2025ರಂದು ವೆಂಬ್ಲಿ ಹಿಲ್ನ ರಸ್ತೆಯೊಂದರಲ್ಲಿ ಇವರು ಪಾನ್ ಉಗುಳಿದ್ದರು. ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಅನುಪಸ್ಥಿತಿಯಲ್ಲೇ ವಿಚಾರಣೆ ನಡೆಸಿದ ನ್ಯಾಯಾಲಯ ದಂಡ ವಿಧಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ : ಕೇರಳದ ಶೇ. 70ರಷ್ಟು ಶಾಸಕರ ಮೇಲಿದೆ ಕ್ರಿಮಿನಲ್ ಕೇಸ್.. ಅರ್ಧಕ್ಕೂ ಹೆಚ್ಚು ಮಂದಿ ಕೋಟ್ಯಾಧಿಪತಿಗಳು!



















