ಕೋಲಾರ: ಬೈಕ್ ಸವಾರರ ಮೇಲೆ ಕೆ.ಎಸ್.ಆರ್.ಟಿ.ಸಿ ಬಸ್ ಹರಿದು ಇಬ್ಬರ ಸಾವು ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಕೋಲಾರದ ಕೆಜಿಎಫ್ ತಾಲೂಕಿನ ಗೊಲ್ಲಹಳ್ಳಿ ಕೆರೆಕಟ್ಟೆ ಬಳಿ ನಡೆದಿದೆ.
ಕೋಲಾರ ಮೂಲದ ಅಭಿಶೇಕ್ ಗೌಡ (35), ಹಾಗೂ ಛತ್ತೀಸ್ ಗಡ ಮೂಲದ ಸಭ್ಯಾ ಸೀದರ್ (37) ಸಾವನ್ನಪ್ಪಿದ ಬೈಕ್ ಸವಾರರು.
ಕೋಲಾರದಿಂದ ಬೇತಮಂಗಲ ಕಡೆಗೆ ಬೈಕ್ ನಲ್ಲಿ ಹೋಗುತ್ತಿದ್ದ ಸವಾರರು. ಬೇತಮಂಗಲ ಕಡೆಯಿಂದ ಕೋಲಾರಕ್ಕೆ ಹೋಗುತ್ತಿದ್ದ ಬಸ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಚಕ್ರಕ್ಕೆ ಸಿಲುಕಿದ ಇಬ್ಬರು ಸವಾರರು ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಮೃತ ಬೈಕ್ ಸವಾರರು ಪೌಲ್ಟ್ರಿ ಫಾರಂವೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಬೇತಮಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.