ನಾವು ಕೂಡ ಸುಂದರವಾಗಿ ಕಾಣಬೇಕು ಎನ್ನುವುದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ಒಬ್ಬ ವ್ಯಕ್ತಿ ಸುಂದರವಾಗಿ ಕಾಣಬೇಕೆಂದರೆ ಆತನ ತ್ವಚೆ ಹಾಗೂ ಮುಖದ ಸೌಂದರ್ಯ ತುಂಬಾ ಮುಖ್ಯವಾಗಿರುತ್ತದೆ. ತಮ್ಮ ಮುಖದ ಸೌಂದರ್ಯಕ್ಕಾಗಿ ಈಗ ಎಲ್ಲರು ಕ್ರೀಮ್ಗಳ ಮೊರೆ ಹೊಗ್ತಾರೆ. ಮಾರ್ಕೆಟ್ನಲ್ಲಿ ಸಿಗುವ ಅನೇಕ ಕ್ರೀಮ್ಗಳನ್ನು ಬಳಸಿ ಮುಖವನ್ನು ಹಾಳುಮಾಡಿಕೊಳ್ಳುತ್ತಾರೆ. ನಾವು ಸುಂದರವಾಗಿ ಕಾಣಬೇಕು ಅಂದ್ರೆ ನಮ್ಮ ಆಹಾರ ಪದ್ದತಿ ಕೂಡ ತುಂಬಾ ಮುಖ್ಯ..
ನೀರು ಸೇವನೆ
ತ್ವಚೆಯ ಆರೋಗ್ಯಕ್ಕಾಗಿ ಅತಿ ಹೆಚ್ಚು ನೀರು ಸೇವನೆ ಮಾಡಬೇಕು. ಹೆಚ್ಚು ನೀರು ಸೇವಿಸುವುದರಿಂದ ನಮ್ಮ ದೇಹದಲ್ಲಿರುವ ರಕ್ತ ಶುದ್ಧಿಕರಣವಾಗಿ ತ್ವಚೆ ಹೊಳಪಾಗುತ್ತದೆ.
ಆರೋಗ್ಯಕರ ಆಹಾರ
ತ್ವಚೆಯ ಆರೋಗ್ಯಕ್ಕಾಗಿ ಆದಷ್ಟು ಸೊಪ್ಪು ತರಕಾರಿಗಳನ್ನು ಸೇವಿಸಬೇಕು. ಕ್ಯಾರೆಟ್, ಬೀಟ್ ರೂಟ್, ಸೌತೆಕಾಯಿ, ಇದೆಲ್ಲಾ ತ್ವಚೆಯನ್ನು ಹೊಳೆಯುವಂತೆ ಮಾಡುತ್ತವೆ. ಆದಷ್ಟು ಜಂಕ್ ಫುಡ್ಗಳಾದ ಗೋಬಿ, ನ್ಯೂಡಲ್ಸ್, ಮೋಮೋಸ್, ಪಾನಿಪುರಿಯಂತಹ ಫುಡ್ಗಳನ್ನು ಆದಷ್ಟು ಕಂಟ್ರೋಲ್ ಮಾಡಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಯಾಕೆಂದರೆ ಇದರಲ್ಲಿ ಹೆಚ್ಚು ಕೆಮಿಕಲ್ಸ್ ಬಳಸುವುರಿಂದ ನಮ್ಮ ತ್ವಚೆಗೆ ಹಾನಿಯಾಗುತ್ತದೆ.
ಕಾಫಿ ಸೇವನೆ:
ಪ್ರತಿದಿನ ಹೆಚ್ಚು ಕಾಫಿ ಕುಡಿಯುವುದರಿಂದ ದೇಹದಲ್ಲಿನ ಹಾರ್ಮೋನುಗಳು ಬದಲಾಗಬಹುದು. ಕಾಫಿಯಲ್ಲಿರುವ ಕೆಫೀನ್ ಮುಖದ ಮೇಲೆ ಕಲೆಗಳನ್ನು ಉಂಟುಮಾಡಬಹುದು. ವಿಶೇಷವಾಗಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಇಂತಹ ಸಮಸ್ಯೆ ಹೆಚ್ಚಾಗಬಹುದು. ಹಾಗಾಗಿ ಮುಖವನ್ನು ಸುಂದರವಾಗಿ ಮತ್ತು ಆರೋಗ್ಯವಾಗಿಡಲು, ಒಳ್ಳೆಯ ಆಹಾರವನ್ನು ಸೇವನೆ ಮಾಡಬೇಕು. ಅತಿಯಾದ ಸಕ್ಕರೆ ಆಹಾರಗಳು, ಫಾಸ್ಟ್ ಫುಡ್ ಮತ್ತು ಡೈರಿ ಉತ್ಪನ್ನಗಳನ್ನು ತಪ್ಪಿಸುವುದರಿಂದ ಚರ್ಮ ಕಾಂತಿಯುತವಾಗುವುದಲ್ಲದೆ ಆರೋಗ್ಯವಾಗಿರುತ್ತದೆ.