ವಾಷಿಂಗ್ಟನ್: ಇರಾನ್ ಗೆ ಅಮೆರಿಕ ಧಮ್ಕಿ ಹಾಕುತ್ತಿದೆ ಎನ್ನಲಾಗಿದೆ.
ಪರಮಾಣು ಒಪ್ಪಂದಕ್ಕೆ (nuclear deal) ಸಹಿ ಹಾಕದಿದ್ದರೆ ಮತ್ತು ಪರಮಾಣು ಕಾರ್ಯಕ್ರಮದ ಕುರಿತು ಅಮೆರಿಕದ ಜೊತೆ ಮಾತುಕತೆಗೆ ಒಪ್ಪದಿದ್ದರೆ ಇರಾನ್ ಮೇಲೆ ಬಾಂಬ್ ದಾಳಿ ನಡೆಸುವುದಾಗಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (donald trump) ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ.
ಒಪ್ಪಂದ ಮಾಡಿಕೊಳ್ಳದಿದ್ದರೆ, ಬಾಂಬ್ ದಾಳಿ ನಡೆಸಬೇಕಾಗುತ್ತದೆ. ಅವರು ಹಿಂದೆಂದೂ ನೋಡಿರದ ರೀತಿಯಲ್ಲಿ ಅವರ ಮೇಲೆ ಬಾಂಬ್ ದಾಳಿ ನಡೆಸುತ್ತೇವೆ.” ಎಂದು ಬೆದರಿಕೆ ಹಾಕಿದ್ದಾರೆ. “ದ್ವಿತೀಯ ಸುಂಕ” ವಿಧಿಸುವುದಾಗಿಯೂ ಅವರು ಎಚ್ಚರಿಸಿದ್ದಾರೆ. ಅಮೆರಿಕ ಅಧ್ಯಕ್ಷ ಟ್ರಂಪ್ ಅವರಿಂದ ಪತ್ರ ಬಂದ ನಂತರ ಇರಾನ್ ಅಮೆರಿಕದೊಂದಿಗೆ ನೇರ ಮಾತುಕತೆ ನಡೆಸಲು ನಿರಾಕರಿಸಿತು. ದೇಶವು ತನ್ನ ಪರಮಾಣು ಕಾರ್ಯಕ್ರಮದ ಬಗ್ಗೆ ಅಮೆರಿಕದೊಂದಿಗೆ ನೇರವಾಗಿ ಮಾತುಕತೆ ನಡೆಸುವುದಿಲ್ಲ ಎಂದು ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಇರಾನ್ ಮತ್ತು ವಿಶ್ವ ಶಕ್ತಿಗಳ ನಡುವಿನ 2018 ರ ಒಪ್ಪಂದದಿಂದ ಅಮೆರಿಕವನ್ನು ಹಿಂತೆಗೆದುಕೊಂಡಿದ್ದರು. ಜನವರಿ 2020ರಲ್ಲಿ ಬಾಗ್ದಾದ್ ಡ್ರೋನ್ ದಾಳಿಯಲ್ಲಿ ಜನರಲ್ ಖಾಸೆಮ್ ಸೊಲೈಮಾನಿ ಹತ್ಯೆಯ ನಂತರ ಅಮೆರಿಕ-ಇರಾನ್ ಸಂಬಂಧಗಳು ಮತ್ತಷ್ಟು ಹದಗೆಟ್ಟವು. ಡೊನಾಲ್ಡ್ ಟ್ರಂಪ್ ಅಮೆರಿಕದಲ್ಲಿ ಮತ್ತೆ ಅಧಿಕಾರಕ್ಕೆ ಬಂದ ನಂತರ, ಟೆಹ್ರಾನ್ ಮೇಲೆ ಗರಿಷ್ಠ ಒತ್ತಡ ಹೇರುವ ಅವರ ನೀತಿ ಜಾರಿಗೆ ಬಂದಿದೆ.