ನವದೆಹಲಿ: ಖ್ಯಾತ ಗೌತಮ್ ಅದಾನಿ ಅವರಿಗೆ ಸಂಕಷ್ಟ ಶುರುವಾಗಿದೆ.
ಅದಾನಿ ಸೇರಿದಂತೆ 8 ಜನರ ವಿರುದ್ಧ ಅಮೆರಿಕದಲ್ಲಿ ಲಂಚದ ಆರೋಪ ಕೇಳಿ ಬಂದಿವೆ. ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿಗೆ ನ್ಯೂಯಾರ್ಕ್ ನ ಡಿಸ್ಟ್ರಿಕ್ಟ್ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ. ಅಮೆರಿಕದ ಶಾರ್ಟ್ಸೆಲ್ಲರ್ ಸಂಸ್ಥೆಯಾದ ಹಿಂಡನ್ಬರ್ಗ್ ಅದಾನಿ ಗ್ರೂಪ್ ವಿರುದ್ಧ ಗಂಭೀರ ಆರೋಪ ಮಾಡಿತ್ತು.
ಅದಾನಿ ಅವರಿಗೆ ಸಂಬಂಧಿಸಿದ ಕಂಪನಿಗಳ ಷೇರುಗಳು ಕೆಳಗೆ ಬಿದ್ದಿವೆ. ಆದರೆ, ಅಮೆರಿಕದ ಜಸ್ಟಿಸ್ ಡಿಪಾರ್ಟ್ಮೆಂಟ್ ಮತ್ತು ಎಸ್ಇಸಿ ಗೌತಮ್ ಅದಾನಿಯನ್ನು ಟಾರ್ಗೆಟ್ ಮಾಡಿವೆ. ಮೇಲ್ನೋಟಕ್ಕೆ ಇದು ಅಮೆರಿಕದ ಕಾನೂನು ಪ್ರಕಾರ ತೆಗೆದುಕೊಳ್ಳಲಾಗುತ್ತಿರುವ ಕ್ರಮ ಎನ್ನಲಾಗಿದೆ. ಆದರೆ, ಕೆಲವು ವರದಿಗಳು ದೊಡ್ಡ ಪಿತೂರಿ ಇದೆ ಎಂದು ಶಂಕಿಸಿವೆ.