ಗದಗ : ರೋಗಿಗಳ ರಕ್ಷಣೆಗೆ ಇರುವ ಆ್ಯಂಬುಲೆನ್ಸ್‌ನಲ್ಲಿ ಜನರ ಸಾಗಾಟ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಗದಗದ ಜಿಮ್ಸ್ ಆಸ್ಪತ್ರೆಗೆ ಸೇರಿದ ಆ್ಯಂಬುಲೆನ್ಸ್‌ನಲ್ಲಿ ಕುರಿಗಳಂತೆ ಜನರನ್ನು ತುಂಬಿ ಸಾಗಾಟ ಮಾಡುತ್ತಿರುವ ವಿಡಿಯೋ ಇದೀಗ ಫುಲ್ ವೈರಲ್ ಆಗಿದ್ದು, ಸರ್ವಾಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ರೋಗಿಗಳನ್ನು ಹೊರತು ಪಡಿಸಿ ಆ್ಯಂಬುಲೆನ್ಸ್‌ನಲ್ಲಿ ಜನರನ್ನು ಸಾಗಾಟ ಮಾಡುವಂತಿಲ್ಲ. ಆದರೆ, ನಿತ್ಯವೂ ಜಿಮ್ಸ್ ಆಸ್ಪತ್ರಯಿಂದ ಗದಗ ನಗರದಕ್ಕೆ ಜನರನ್ನು ಸಾಗಾಟ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಜಿಮ್ಸ್ ಅಧಿಕಾರಿಗಳಿಗೆ ಗೋತ್ತಿಲ್ಲದೇ, ಸಿಬ್ಬಂದಿ ಆ್ಯಂಬುಲೆನ್ಸ್ ದುರುಪಯೋಗ ಮಾಡಿಕೊಳ್ಳುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ಆ್ಯಂಬುಲೆನ್ಸ್‌ನಲ್ಲಿ ಜನರ ಸಾಗಾಟಕ್ಕೆ ಗದಗ ಜಿಲ್ಲೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಜಿಮ್ಸ್ ಆಸ್ಪತ್ರೆಯಿಂದ ಗದಗ ನಗರಕ್ಕೆ ಬಸ್ ಸೌಕರ್ಯ ಇಲ್ಲದಕ್ಕೆ ಆ್ಯಂಬುಲೆನ್ಸ್‌ನಲ್ಲಿ ಜನರ ಪ್ರಯಾಣನಾ? ಎಂಬ ಪ್ರಶ್ನೆ ಕೂಡ ವ್ಯಕ್ತವಾಗಿದೆ.
ಆ್ಯಂಬುಲೆನ್ಸ್ ಜನರನ್ನು ಸಾಗಾಟ ಮಾಡುವುದರಿಂದ ರೋಗಿಗಳಿಗೆ ಇನ್ಫೆಕ್ಷನ್ ಆಗುವ ಭಯ ಉಂಟಾಗಿದೆ. ಇದರಿಂದ ರೋಗಿಗಳಿಗೂ ಹಾಗೂ ಜನರಿಗೂ ಅಪಾಯವಾಗಲಿದ್ದು, ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಎಂಬ ಸ್ಥಿತಿ ಎದುರಾಗಿದೆ.
ಇದನ್ನೂ ಓದಿ : IDBI ಬ್ಯಾಂಕ್‌ನಲ್ಲಿ 1,300 ಹುದ್ದೆಗಳ ನೇಮಕಾತಿ.. ಕೂಡಲೇ ಅರ್ಜಿ ಸಲ್ಲಿಸಿ



















