ಬೆಂಗಳೂರು : ಫ್ಯಾನ್ಸ್‌ಗೆ ಏಪ್ರಿಲ್‌ನಲ್ಲಿ ಸರ್ಪ್ರೈಸ್ ನೀಡಲು ಟಾಕ್ಸಿಕ್ ತಂಡ ಸಜ್ಜಾಗಿದೆ. ಏಪ್ರಿಲ್ ಎರಡನೇ ವಾರದಲ್ಲಿ ಬಹು ನಿರೀಕ್ಷಿತ ತಬಾಹಿ ವಿಡಿಯೋ ಸಾಂಗ್ ಬಿಡುಗಡೆಯಾಗಲಿದೆ. ಯೋಗರಾಜ್ ಭಟ್ಟರ ಸಾಹಿತ್ಯದಲ್ಲಿ ಈ ಹಾಡಿನಲ್ಲಿ ಯಶ್ ಮತ್ತು ಕಿಯಾರ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದೆ.
ಹಾಡಿನ ಲಿಕ್ಡ್ ಮೇಕಿಂಗ್ ವಿಡಿಯೋ ಸಿನಿ ಪ್ರೇಮಿಗಳಲ್ಲಿ ಈಗಾಗಲೇ ಕಿಚ್ಚು ಹುಟ್ಟಿಸಿದ್ದು, ಯಶ್–ಕಿಯಾರ ಅವರ ಕೆಮಿಸ್ಟ್ರಿ ಗಮನ ಸೆಳೆದಿದೆ. ಈ ಹಾಡಿನ ಬಿಡುಗಡೆಗೆ ಪ್ರಚಾರದ ಕೆಲಸಕ್ಕೆ ಟಾಕ್ಸಿಕ್ ತಂಡ ಪೂರ್ಣ ಸಜ್ಜಾಗಿದೆ.
ಟ್ರೈಲರ್ ಪ್ಯಾನ್ ಇಂಡಿಯಾ ಪ್ರೆಸ್ ಮೀಟ್ ಮೂಲಕ ಮೇ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗುವುದು. ಸಿನಿಮಾದ ರಿಲೀಸ್ ದಿನಾಂಕ ಜೂನ್ 4ಕ್ಕೆ ಫಿಕ್ಸ್ ಆಗಿದ್ದು, ಮುಂಬೈನಲ್ಲಿ ಯಶ್ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.



















