ಬೆಂಗಳೂರು : ಆಷಾಢ ಮುಗಿದು ಶ್ರಾವಣ ಮಾಸ ಆರಂಭ ಆಗುತ್ತಿದ್ದಂತೆ ಸಾಲು ಸಾಲು ಹಬ್ಬಗಳು ಶುರುವಾಗಿದ್ದು, ವರಮಹಾಲಕ್ಷ್ಮೀ ವೃತಾಚರಣೆಗೆ ಕ್ಷಣಗಣನೆ ಆರಂಭವಾಗಿದೆ.
ನಾಳೆಯೇ ವರಮಹಾಲಕ್ಷ್ಮೀ ವೃತಾಚರಣೆಯಿರುವುದರಿಂದ ಮಾರ್ಕೆಟ್ ಗಳಲ್ಲಿ ಜನ ಸಂತೆ ಸೇರಿದ್ದಾರೆ. ನಗರದಲ್ಲಿ ಈಗಾಗಲೇ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಕೆ. ಆರ್ ಮಾರ್ಕೆಟ್, ಮಲ್ಲೇಶ್ವರಂ ಕಡೆ ಜನ ಸಾಗರ ಹರಿದು ಬರುತ್ತಿದ್ದು, ಉಸಿರುಗಟ್ಟುವ ವಾತಾವರಣದಲ್ಲೇ ಫಲಪುಷ್ಪ ಖರೀದಿ ಜೋರಾಗಿ ನಡೆಯುತ್ತಿದೆ.
ವರಮಹಾಲಕ್ಷ್ಮೀ ವೃತಾಚರಣೆಯ ಹಿನ್ನಲೆಯಲ್ಲಿ, ಕಳೆದ ವಾರಕ್ಕಿಂತ ಈ ವಾರ ಫಲಪುಷ್ಪ, ತರಕಾರಿಗಳ ದರವು ಹೆಚ್ಚಳವಾಗಿದೆ.
ಇಂದಿನ ಬೆಲೆ ಹೇಗಿದೆ ?
ತರಕಾರಿ ಪ್ರಸ್ತುತ ದರ & ಹಿಂದಿನ ದರ
ಹುರುಳಿಕಾಯಿ 120 | 80
ಕ್ಯಾಪ್ಸಿಕಂ 60 | 40
ಬೀನ್ಸ್ 60 | 40
ಬದನೆಕಾಯಿ 60 | 40
ಹೂಕೋಸು 20 | 15
ತೊಂಡೆಕಾಯಿ 40 | 30
ಹಣ್ಣುಗಳು
ಹಣ್ಣು ಪ್ರಸ್ತುತ ದರ | ಹಿಂದಿನ ದರ
ಸೇಬು 250 | 200
ದಾಳಿಂಬೆ 200 | 150
ಕಿತ್ತಳೆ 200 | 160
ಮೂಸಂಬಿ 100 | 80
ಸಪೋಟ 150 | 100
ದ್ರಾಕ್ಷಿ 200 | 150
ಸೀತಾಫಲ. 100 | 60
ಹೂವಿನ ದರ (ಒಂದು ಕೆ.ಜಿಗೆ)
ಕನಕಾಂಬರ : 2000ರೂ-3000ರೂ
ಮಲ್ಲಿಗೆ : 1000ರೂ
ಮಳ್ಳೆ ಹೂವು : 600-800ರೂ
ಕಾಕಡ ಹೂವು : 600-700ರೂ
ಸೇವಂತಿಗೆ : 500ರೂ
ಗುಲಾಬಿ : 300 ರೂ
ಕಣಗಲೆ : 250ರೂ
ಸುಗಂಧರಾಜ : 180-200ರೂ
ತಾವರೆ ಹೂವು (ಜೋಡಿ) : 80- 100 ರೂ.
ಬಾಳೆಕಂದು(ಬಾಳೆದಂಡು) : 60-80 ರೂ.


















