ಭಾರತಕ್ಕೆ ಇಂದು ವಿಜಯ್ ದಿವಸ್ ಆಗಿದೆ. ಭಾರತೀಯ ಸೇನೆಯು ಇಂದು ಪಾಕ್ ಬಗ್ಗು ಬಡಿದ ದಿನ. ಡಿ. 16 ರಂದು ಭಾರತ ಬಾಂಗ್ಲಾದೇಶದ ವಿಮೋಚನೆಗಾಗಿ ಹೋರಾಡಿ ಪಾಕ್ ವಿರುದ್ದ ಗೆಲುವು ಸಾಧಿಸಿದ ದಿನವಿದು. ಹೀಗಾಗಿ ಇಂದು ವಿಜಯ ದಿವಸ್ ಆಚರಿಸಲಾಗುತ್ತದೆ. ಭಾರತೀಯ ಸೇನೆಯು ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ದಿನವಿದು.
ಹೀಗಾಗಿ ಈ ದಿನವು ಭಾರತೀಯರ ಪಾಲಿಗೆ ಸ್ಮರಣೀಯ ದಿನವಾಗಿದೆ. ಯುದ್ಧದ ಬಳಿಕ ಪೂರ್ವ ಪಾಕಿಸ್ತಾನದಿಂದ ಬಾಂಗ್ಲಾ ಪ್ರತ್ಯೇಕಗೊಂಡು ಬಾಂಗ್ಲಾದೇಶವು ಉದಯವಾಯಿತು. ಯುದ್ಧದಲ್ಲಿ ರಾಷ್ಟ್ರಕ್ಕಾಗಿ ಹುತಾತ್ಮರಾದ ಸೈನಿಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ದಿನದ ಆಚರಣೆ ಚಾಲ್ತಿಯಲ್ಲಿದೆ.
ಭಾರತ ಹಾಗೂ ಪಾಕಿಸ್ತಾನ ವೈಷಮ್ಯ ಈ ಬಾಂಗ್ಲಾ ವಿಮೋಚನೆ ಕಾರಣವಾಗಿತ್ತು. 1971ರಲ್ಲಿ ಬಾಂಗ್ಲಾದೇಶ ವಿಮೋಚನೆಗಾಗಿ ಭಾರತ ನೀಡಿದ ಬೆಂಬಲವು ಪಾಕಿಸ್ತಾನವು ಭಾರತದ ಮೇಲೆ ಯುದ್ಧ ಸಾರಲು ಮುಖ್ಯ ಆಪರೇಷನ್ ಚೆಂಗೀಸ್ ಖಾನ್ ಹೆಸರಿನಲ್ಲಿ 1971ರ ಡಿ.3ರಂದು ಪಾಕಿಸ್ತಾನದ ಯುದ್ಧ ವಿಮಾನಗಳು ಭಾರತೀಯ ವಾಯುನೆಲೆಗಳ ಮೇಲೆ ದಾಳಿ ನಡೆಸಿದ್ದವು.
ಭಾರತ ಕೂಡ ನೇರವಾಗಿ ಯುದ್ಧಕ್ಕೆ ಆಹ್ವಾನ ನೀಡಿತು. ಭಾರತವು ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನದ ಮೇಲೆ ದಾಳಿ ನಡೆಸುವ ಮೂಲಕ ಯುದ್ಧ ಆರಂಭಿಸಿತು. ಪಾಕಿಸ್ತಾನ ಪಡೆಗಳ ಮುಖ್ಯಸ್ಥ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಝಿ ಡಿ.16 ರಂದು 93 ಸಾವಿರ ಸೈನಿಕರ ಗುಂಪಿನೊಂದಿಗೆ ಭಾರತೀಯ ಸೇನೆಗೆ ಶರಣಾದ. ಆನಂತರ ವಿಶ್ವಸಂಸ್ಥೆ ಮಧ್ಯಸ್ಥಿಕೆಯಲ್ಲಿ ಬಾಂಗ್ಲಾದೇಶವನ್ನು ಹೊಸ ರಾಷ್ಟ್ರವಾಗಿ ಘೋಷಿಸಲು ಪಾಕಿಸ್ತಾನ ಒಪ್ಪಿಗೆ ಸೂಚಿಸಿತು. 1971ರ ಡಿಸೆಂಬರ್ 16ರಂದು ಢಾಕಾದಲ್ಲಿ ಒಪ್ಪಂದಕ್ಕೆ ಸಹಿ ಹಾಕಿ ಯುದ್ಧ ಕೊನೆಗೊಳಿಸಲಾಯಿತು.