ಶಿವಮೊಗ್ಗ: ಮಲೆನಾಡಿನಾದ್ಯಂತ ಭೂಮಿ ಹುಣ್ಣಿಮೆ ಹಬ್ಬದ ಸಂಭ್ರಮ ಮನೆ ಮಾಡಿದ್ದು, ರೈತಾಪಿ ವರ್ಗ ದ ಜನರು ಭೂಮಿ ಹುಣ್ಣಿಮೆ ಹಬ್ಬವನ್ನು ಇಂದು ಸಡಗರ ಸಂಭ್ರಮದಿಂದ ಆಚರಣೆ ಮಾಡಿದ್ದಾರೆ.
ಭೂ ತಾಯಿಯು ಈ ಸಮಯದಲ್ಲಿ ಗರ್ಭಿಣಿಯಂತೆ ಬೆಳೆಗಳಿಂದ ಮೈ ತುಂಬಿಕೊಂಡಿರುತ್ತಾಳೆ ಎಂಬ ಪ್ರತೀತಿ ಹಿನ್ನೆಲೆಯಲ್ಲಿ ರೈತರು ತಾಯಿನ್ನು ಗರ್ಭಿಣಿಯ ಸ್ಥಾನದಲ್ಲಿಟ್ಟು, ಆಕೆಯ ಸೀಮಂತವನ್ನು ಸಂಭ್ರಮದಿಂದ ಆಚರಿಸಿ ಹೊಲ, ಗದ್ದೆಗಳಿಗೆ ಪೋಜೆ ಸಲ್ಲಿಸುತ್ತಾರೆ.
ಶಿವಮೊಗ್ಗದ ವಿವಿಧೆಡೆ ಭೂಮಿ ಹುಣ್ಣುಮೆ ಹಬ್ಬವನ್ನುಆಚರಿಸಿದ ರೈತರು, ವಿವಿಧ ರೀತಿ ತಿಂಡಿ ತಿನಿಸುಗಳನ್ನು ತಯಾರಿಸಿ ಭೂತಾಯಿಗೆ ಅರ್ಪಣೆ ಮಾಡುತ್ತಾರೆ. ಹಬ್ಬದ ಆಕರ್ಷಕವಾಗಿ ಭೂಮಣಿ ಬುಟ್ಟಿಗಳನ್ನು ತಯಾರಿಸಿ ಚಿತ್ತಾರ ಬರೆದು, ಅದರಲ್ಲಿ ಮಾಡಿರುವ ಖಾದ್ಯಗಳನ್ನು ತುಂಬಿಸಿಕೊಂಡು ಹೋಗಿ ಭೂತಾಯಿಗೆ ಸಮರ್ಪಿಸುತ್ತಾರೆ.
ನಂತರ ಹೊಲದಲ್ಲೇ ರೈತ ಕುಟುಂಬಗಳು ಸಾಮೂಹಿಕ ಊಟ ಮಾಡಿದ್ದಾರೆ. ರೈತರು ಮಳೆಯ ನಡುವೆಯು ಸಂಭ್ರಮದಿಂದ ಹಬ್ಬದ ಆಚರಣೆಯನ್ನು ಮಾಡಿದ್ದಾರೆ.