ಕಲಬುರ್ಗಿ: ಯುವಕನ ಕಿರುಕುಳಕೆ ಬೇಸತ್ತು ಯುವತಿಯೊಬ್ಬಳು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರ್ಗಿ ಜಿಲ್ಲೆಯ ಕಮಲಾಪುರದ ಕುರಿಕೋಟ ಬ್ರಿಡ್ಜ್ ಬಳಿ ನಡೆದಿದೆ.
ಭೂಷಣಗಿ ಗ್ರಾಮದ ಸಾಕ್ಷಿ 22 ಆತ್ಮಹತ್ಯಗೆ ಶರಣಾದ ಯುವತಿ. ಸಹೋದರಿಯೊಂದಿಗೆ ಆಸ್ಪತ್ರೆಗೆ ಹೋಗುವುದಾಗಿ ಹೇಳಿ ಬಂದ ಯುವತಿಯು ಕುರಿಕೋಟೆ ಬ್ರಿಡ್ಜ್ ಮೇಲಿಂದ ಬೆಣ್ಣೆತೋರೆ ಡ್ಯಾಂ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕಮಲಾಪುರ ತಾಲೂಕಿನ ರಾಜನಾಳ ಗ್ರಾಮದ ಅಭಿಷೇಕ್ ಎಂಬಾತ ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಯುವತಿಯ ಜೊತೆ ಇರುವ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದ, ಇದರಿಂದ ಮನನೊಂದ ಯುವತಿ ಆತ್ಮಹತ್ಯಗೆ ಶರಣಾಗಿದ್ದಾಳೆ.
ಯುವತಿಯ ಮೃತ ದೇಹಕ್ಕಾಗಿ ಅಗ್ನಿಶಾಮಕದಳ ಶೋಧಕಾರ್ಯ ನಡೆಸುತ್ತಿದ್ದು, ಈ ಕುರಿತು ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



















