ಕೊಪ್ಪಳ: ಸರ್ಕಾರಿ ಬಸ್‌ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ನಾಲ್ವರಿಗೆ ಗಾಯವಾಗಿರುವ ಘಟನೆ ಕೊಪ್ಪಳ ತಾಲೂಕಿನ ಗಿಣಿಗೇರಾ ಸಮೀಪದ ಕಲ್ಯಾಣಿ ಕಾರ್ಖಾನೆ ಬಳಿ ನಡೆದಿದೆ.
ಕೊಪ್ಪಳದಿಂದ ಹುಲಿಗಿ ಹೊರಟಿದ್ದ ಸಾರಿಗೆ ಬಸ್ಸಗೆ ಕಲ್ಯಾಣಿ ಕಾರ್ಖಾನೆ ಅದಿರು ಸಾಗಿಸುತ್ತಿದ್ದ ಟಿಪ್ಪರ್ ಹಿಂಬದಿಯಿಂದ ಬಂದು ಗುದ್ದಿದ ಪರಿಣಾಮ ಈ ಅವಘಡ ಸಂಭವಿಸಿದೆ. ಬಸ್ಸಿನ ಗಾಜುಗಳು ಚೂರು, ಬಸ್ಸಿನಲ್ಲಿದ್ದ ಮಹಿಳೆಯರಿಗೆ ಚುಚ್ಚಿ ಗಾಯವಾಗಿದ್ದು, ಗಾಯಾಳುಗಳು ಜಿಲ್ಲಾ ಆಸ್ಪತ್ರೆ ದಾಖಲಿಸಲಾಗಿದೆ. ಈ ಘಟನಾ ಸಂಬಂಧ ಕೊಪ್ಪಳ ಮುನಿರಾಬಾದ್ ಪೊಲೀಶ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹೊಸ ವರ್ಷಕ್ಕೆ BMTCಗೆ ಭರ್ಜರಿ ಆದಾಯ | ನಿನ್ನೆ ಒಂದೇ ದಿನ ಕಲೆಕ್ಷನ್ ಆಗಿದ್ದೆಷ್ಟು ಗೊತ್ತಾ?



















