ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೂರನೇ ಟಿ20 ಪಂದ್ಯದಲ್ಲಿ ಭಾರತೀಯ ಆಟಗಾರ ತಿಲಕ್ ವರ್ಮಾ ದಾಖಲೆಯ ಶತಕ ಸಿಡಿಸಿದ್ದಾರೆ.
ತಿಲಕ್ ಕೇವಲ 51 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ಅವರ ಟಿ20 ವೃತ್ತಿ ಜೀವನದ ಚೊಚ್ಚಲ ಶತಕ ಎಂಬುವುದು ವಿಶೇಷ. ಸೂರ್ಯಕುಮಾರ್ ಯಾದವ್ ಕಣಕ್ಕಿಳಿಯುತ್ತಿದ್ದ 2ನೇ ಕ್ರಮಾಂಕದಲ್ಲಿ ಅಖಾಡಕ್ಕಿಳಿದ ತಿಲಕ್, ಕೊನೆಯವರೆಗೂ ಅಜೇಯರಾಗಿ ಉಳಿದು ತಂಡವನ್ನು 219 ರನ್ ಗಳಿಗೆ ಏರಿಸಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ವಿಶೇಷ ಆರಂಭ ಸಿಗಲಿಲ್ಲ. ಸಂಜು ಸ್ಯಾಮ್ಸನ್ ಖಾತೆ ತೆರೆಯದೆ ಔಟಾದರು. ನಂತರ ಬಂದ ತಿಲಕ್, ಪವರ್ಪ್ಲೇನಲ್ಲಿ ವೇಗವಾಗಿ ರನ್ ಗಳಿಸಿದರು. ಅಲ್ಲದೆ ಅಭಿಷೇಕ್ ಜೊತೆಗೂಡಿ ಎರಡನೇ ವಿಕೆಟ್ಗೆ 107 ರನ್ಗಳ ಜೊತೆಯಾಟ ನೀಡಿದರು. ಇನಿಂಗ್ಸ್ನ 19 ನೇ ಓವರ್ನಲ್ಲಿ ತಮ್ಮ ವೃತ್ತಿಜೀವನದ ಮೊದಲ ಶತಕ ಸಿಡಿಸಿದರು.
51 ಎಸೆತಗಳನ್ನು ಎದುರಿಸಿದ ತಿಲಕ್, 196.07 ಸ್ಟ್ರೈಕ್ ರೇಟ್ನಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್ಗಳ ನೆರವಿನಿಂದ ಬಾರಿಸಿ ಶತಕ ಪೂರೈಸಿದರು. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕ ಸಿಡಿಸಿದ ಭಾರತದ 11ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ದಕ್ಷಿಣ ಆಫ್ರಿಕಾ ವಿರುದ್ಧ ಈ ಸಾಧನೆ ಮಾಡಿದ ಭಾರತದ 5 ನೇ ಆಟಗಾರ ಎಂಬ ದಾಖಲೆ ತಿಲಕ್ ಪಾಲಾಯಿತು.
ತಿಲಕ್ ವರ್ಮಾ ಅವರ ಈ ಶತಕದ ಇನ್ನಿಂಗ್ಸ್ನಿಂದಾಗಿ ಭಾರತ ತಂಡ 219 ರನ್ ಗಳಿಸಿದೆ.