ಮೈಸೂರು: ಹುಲಿ ದಾಳಿ ಬೆನ್ನಲ್ಲೇ ಮೈಸೂರು ನಗರದ ಹೊರ ವಲಯದ ಬೆಮಲ್ ಕಾರ್ಖಾನೆಯಲ್ಲಿ ಹುಲಿ ಓಡಾಟ ನಡೆಸಿರುವ ವಿಡಿಯೋವೊಂದು ವೈರಲ್ ಆಗಿದೆ.
ಹುಲಿ ಓಡಾಟದ ದೃಶ್ಯ ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದೆ. ರಾಜಾರೋಷವಾಗಿ ಓಡಾಡುವ ಹುಲಿ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಬೆಮೆಲ್ ಸುತ್ತಮುತ್ತಲಿನ ಪ್ರದೇಶದ ಜನರಲ್ಲಿ ಭಾರೀ ಆತಂಕ ಮೂಡಿಸಿದೆ.
ಕಳೆದ ಕೆಲ ದಿನಗಳಿಂದ ಮೈಸೂರು ಜಿಲ್ಲೆಯಲ್ಲಿ ಹುಲಿ ಕಾಟ ಹೆಚ್ಚಾಗಿದೆ. ಸರಗೂರು, ಹುಣಸೂರು ತಾಲೂಕು ಬಳಿಕ ಈಗ ಮೈಸೂರು ನಗರದ ಹೊರವಲಯದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಜನರ ನಿದ್ದೆಗೆಡಿಸಿದೆ.
ಇತ್ತೀಚೆಗೆ ಗೌಡನಕಟ್ಟೆ ಗ್ರಾಮದಲ್ಲಿ ಹುಲಿ ಇಬ್ಬರು ರೈತರ ಮೇಲೆ ದಾಳಿ ನಡೆಸಿತ್ತು. ಬಳಿಕ ಕಾರ್ಯಾಚರಣೆ ನಡೆಸಿದ್ದ ಅರಣ್ಯ ಇಲಾಖೆ ಹುಲಿಯನ್ನ ಸೆರೆ ಹಿಡಿದಿತ್ತು.
ಇದನ್ನೂ ಓದಿ : ಕಾರು, ಕಂಟೇನರ್ ನಡುವೆ ನುಗ್ಗಿದ ಬೈಕ್ ಚಾಲಕ | ಅಮ್ಮ- ಮಗ ಸಾವು



















