ಮೈಸೂರು: ನಾಗರಹೊಳೆ ಸಫಾರಿಯಲ್ಲಿ ತಾಯಿ ಹುಲಿ ಜೊತೆ 3 ಮರಿಗಳ ದರ್ಶನವಾಗಿದ್ದು, ಸಫಾರಿಗರು ಸಂತಸ ಪಟ್ಟಿದ್ದಾರೆ.
ಕಬಿನಿ ಹಿನ್ನೀರಿನ ದಮ್ಮನಕಟ್ಟೆ ಸಫಾರಿಯಲ್ಲಿ ಹುಲಿ ಹಾಗೂ ಮರಿಗಳ ದರ್ಶನ ವಾಗಿದೆ. ಭಾನುವಾರ ಬೆಳಗ್ಗೆ ಸಫಾರಿಗಿಗೆ ಈ ದೃಶ್ಯ ಕಂಡು ಬಂದಿದೆ. ಕಬಿನಿ ಹಿನ್ನೀರಿನ ಬಳ್ಳೆ ರೇಂಜಿನ ವ್ಯಾಪ್ತಿಯಲ್ಲಿ ಸಫಾರಿಗರು ತೆರಳಿದ್ದ ಸಂದರ್ಭದಲ್ಲಿ ಕ್ಯಾಮೆರಾದಲ್ಲಿ ಈ ಅದ್ಭುತ ದೃಶ್ಯ ಸೆರೆಯಾಗಿದೆ. ಬೆಳ್ಳಂಬೆಳಗ್ಗೆ ಹುಲಿಗಳನ್ನು ಕಂಡು ಪ್ರವಾಸಿಗರು ಸಂತಸ ಪಟ್ಟಿದ್ದಾರೆ. ಹುಲಿಗಳ ದರ್ಶನವಾಗುತ್ತಿರುವ ಹಿನ್ನೆಲೆಯಲ್ಲಿ ವೀಕೇಂಡ್ ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ.