ಬೆಂಗಳೂರು : ಬೇಕಾಬಿಟ್ಟಿ ದರ ಏರಿಕೆ ಮಾಡಿದ್ದ ಮಲ್ಟಿಪ್ಲೆಕ್ಸ್ ಚಿತ್ರ ಮಂದಿರಗಳಲ್ಲಿ 200 ರೂ. ಟಿಕೆಟ್ ದರ ನಿಗದಿ ಮಾಡಿರುವ ಸರ್ಕಾರದ ಕೆಲಸಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರಿಂದ ಸರ್ಕಾರಕ್ಕೆ ಮತ್ತೊಂದು ಮನವಿ ಕೇಳಿ ಬಂದಿದ್ದು, ಮಲ್ಟಿಪ್ಲೆಕ್ಸ್ ಗಳಲ್ಲಿ ನೀರಿಗೂ ಎಗ್ಗಿಲ್ಲದಂತೆ ದರ ಏರಿಕೆ ಮಾಡಿದ್ದಾರೆ. ನೀರಿನ ದರ ಇಳಿಕೆ ಮಾಡಬೇಕು. ಅಥವಾ ನೀರಿನ ಬಾಟಲ್ ಪ್ರವೇಶಕ್ಕೆ ಅನುಮತಿ ನೀಡಬೇಕು ಹಾಗೂ ಅಲ್ಲಿ ಸಿಗುವ ಆಹಾರ, ಟೀ ಕಾಫಿಯ ಬೆಲೆಯನ್ನು ಇಳಿಸುವಂತೆ ಆಗ್ರಹ ಮಾಡಿದ್ದಾರೆ.
ಸರ್ವರಿಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನೆಮಾ ನೋಡುವ ರೀತಿಯ ದರ ನಿಗದಿ ಪಡಿಸುವಂತೆ ಸಾರ್ವಜನಿಕರು ಮಲ್ಟಿಪ್ಲೆಕ್ಸ್ ಗಳ ವಿರುದ್ಧ ಧ್ವನಿ ಎತ್ತಿದ್ದಾರೆ.



















