ಬೆಂಗಳೂರು: ಅಪಹರಣ ಪ್ರಕರಣದಲ್ಲಿ ಈಗಾಗಲೇ ಜೈಲು ಪಾಲಾಗಿರುವ ಶಾಸಕ ಹೆಚ್.ಡಿ. ರೇವಣ್ಣ ಮೂರು ದಿನ ಏಕಾಂಗಿಯಾಗಿಯೇ ಕಾಲ ಕಳೆಯಬೇಕಾಗಿದೆ. ನಿದ್ದೆ ಇಲ್ಲದೆ ಅವರು ಹೈರಾಣಾಗಿದ್ದಾರೆ. ಈ ಮಧ್ಯೆ ರೇವಣ್ಣಗೆ ಮತ್ತೊಂದು ಶಾಕ್ ಎದುರಾಗಿದೆ.
ಇಂದಿನಿಂದ ಮೂರು ದಿನ ಮೂರು ದಿನ ಸರ್ಕಾರಿ ರಜೆಯ ಹಿನ್ನೆಲೆಯಲ್ಲಿ ಆಪ್ತರು, ಕುಟುಂಬಸ್ಥರಿಗೆ ರೇವಣ್ಣ ಭೇಟಿ ಮಾಡಲು ಅವಕಾಶ ನೀಡಿಲ್ಲ. ಆಪ್ತರ ಭೇಟಿ ವೇಳೆ ಅವರು ಮನಸ್ಸಿನ ನೋವು ಹೇಳಿಕೊಂಡು ಸಮಾಧಾನ ಪಡುತ್ತಿದ್ದರು. ಸದ್ಯ ಅದೂ ಇಲ್ಲದಂತಾಗಿದೆ.
ಬೆಂಗಳೂರಿನ ಬಸವನಗುಡಿಯಲ್ಲಿರುವ ರೇವಣ್ಣ ನಿವಾಸಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಎಸ್ಐಟಿ ಅಧಿಕಾರಿಗಳಿಂದ ಪಂಚನಾಮೆ ಸಾಧ್ಯತೆ ಹಿನ್ನೆಲೆ ಅಗತ್ಯವಿರುವ ಪರಿಕರಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಾಮೀನು ನಿರೀಕ್ಷೆಯಲ್ಲಿದ್ದ ಹೆಚ್.ಡಿ.ರೇವಣ್ಣಗೆ ಜೈಲೇ ಗತಿ ಎನ್ನುವಂತಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಹೆಚ್.ಡಿ.ರೇವಣ್ಣ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೊಟ್ಟೆ ನೋವು ಕಾಣಿಸಿಕೊಂಡ ನಂತರ ಬೆನ್ನು ಸಮಸ್ಯೆ ಕೂಡ ಅವರನ್ನು ಕಾಡಿದೆ. ಹೀಗಾಗಿ ವೈದ್ಯರು ಚಿಕಿತ್ಸೆ ನೀಡಿದ್ದಾರೆ.
ರೇವಣ್ಣಗೆ ಜೈಲಲ್ಲಿ ಚಿಕಿತ್ಸೆ ನೀಡಿದ ನಂತರ ಮಲಗುವುದಕ್ಕಾಗಿ ದಿವಾನ್ ಕಾಟ್ ನೀಡಲಾಗಿದೆ. ಜೈಲಿನ ಕ್ವಾರಂಟೈನ್ ರೂಮ್ ನಲ್ಲಿ ರೇವಣ್ಣ ಇದ್ದಾರೆ. ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ, ಅರಕಲಗೂಡು ಶಾಸಕ ಎ.ಮಂಜು ಪರಪ್ಪನ ಅಗ್ರಹಾರಕ್ಕೆ ತೆರಳಿ ರೇವಣ್ಣ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದರು.