ಬೆಳಗಾವಿ: ಈಶ್ವರಪ್ಪ ಮನೆಯಲ್ಲಿ ನಡೆದ ಸಭೆಯಲ್ಲಿ ವಿಶೇಷತೆ ಇಲ್ಲ. ಈಶ್ವರಪ್ಪ ಮನೆಗೆ ಹೋಗಿ ಬರೋಣ ಎಂದು ಯತ್ನಾಳ್ ಕೇಳಿದ್ದರು. ಹೀಗಿಗ ಈಶ್ವರಪ್ಪ ಮನೆಗೆ ತೆರಳಲಾಗಿತ್ತು. ಆದರೆ, ರಾಜುಗೌಡ ಬಂದಿದ್ದು ಗೊತ್ತಿರಲಿಲ್ಲ. ರಾಜುಗೌಡ ಬಂದಿದ್ದು ಗೊತ್ತಾದರೆ, ನಾನು ಒಳಗೆ ಹೋಗುತ್ತಿರಲಿಲ್ಲ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಈಶ್ವರಪ್ಪ-ಯತ್ನಾಳ್ ತಮ್ಮ ಸಮುದಾಯಕ್ಕೆ ಮೀಸಲಾತಿ ಕೊಡಿಸುವ ಕುರಿತು ಚರ್ಚಿಸಿದರು. ಪಂಚಮಸಾಲಿಗೆ 2 ಎ ಮೀಸಲಾತಿ, ಕುರುಬ ಸಮಾಜಕ್ಕೆ ಎಸ್ಸಿ ಮೀಸಲಾತಿ ಬಗ್ಗೆಯಷ್ಟೇ ಚರ್ಚೆ ಆಗಿದೆ ಅಷ್ಟೇ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಈಶ್ವರಪ್ಪರನ್ನು ಬಿಜೆಪಿಗೆ ಕರೆತರುವ ಕುರಿತು ಚರ್ಚೆಯೇ ಆಗಿಲ್ಲ. ಈಶ್ವರಪ್ಪರನ್ನು ಬಿಜೆಪಿಗೆ ಕರೆತರುವ ಶಕ್ತಿ ನನಗಿಲ್ಲ. ಈಶ್ವರಪ್ಪರನ್ನು ನಮ್ಮ ರಾಷ್ಟ್ರೀಯ ನಾಯಕರೇ ಉಚ್ಛಾಟನೆ ಮಾಡಿದ್ದಾರೆ. ಈಶ್ವರಪ್ಪ ಅವರನ್ನು ರಾಷ್ಟ್ರೀಯ ನಾಯಕರೇ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ನಿಜವಾದ ಚರ್ಚಿತ ವಿಷಯ ಹೇಳಿದರೆ ರಾಜೂಗೌಡನನ್ನು ವಿಜಯೇಂದ್ರ ಹೊಡೆಯುತ್ತಿದ್ದ ಎಂದು ಹೇಳಿದ್ದಾರೆ.