ಈ ಪ್ರಕರಣ ಬೇಧಿಸಿದ ಪೊಲೀಸರು ಪಾರ್ಟಿ ಹೆಸರಿನಲ್ಲಿ ಪರಸ್ಪರ ಗರ್ಲ್ ಫ್ರೆಂಡ್ ಎಕ್ಸ್ ಚೇಂಜ್ ಮಾಡಿಕೊಳ್ಳುತ್ತಿದ್ದ ಕರಾಳ ದಂಧೆಯನ್ನು ಬಯಲು ಮಾಡಿದ್ದಾರೆ. ಸ್ವಿಂಗರ್ಸ್ ಎಂಬ ಹೆಸರಿನಲ್ಲಿ ಈ ಕರಾಳ ದಂಧೆ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.
ಹರೀಶ್ ಎಂಬ ಕಾಮುಕ ಪರಿಚಯಸ್ಥ ಯುವತಿಯರನ್ನು ಪಾರ್ಟಿಗೆಂದು ಕರೆಯಿಸಿ ಸ್ನೇಹಿತನಿಗೆ ಸಹಕರಿಸುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಒಪ್ಪದ ಯುವತಿಯ ಮೇಲೆ ಸ್ನೇಹಿತರೊಂದಿಗೆ ಸೇರಿ ಅತ್ಯಾಚಾರ ನಡೆಸಿದ್ದಾನೆ. ಇದರಿಂದ ಆಘಾತಕ್ಕೊಳಗಾದ ಯುವತಿ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಪೊಲೀಸರು ಹರೀಶ್ ಜೊತೆ ಹೇಮಂತ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಕಾಮುಕ ಹರೀಶ್ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡಿದ್ದ. ಆನಂತರ ಆ ಯುವತಿಯನ್ನು ಲೈಂಗಿಕವಾಗಿ ಬಳಕೆ ಮಾಡಿಕೊಂಡಿದ್ದ. ಈ ಯುವತಿಯ ಮೇಲೆಯೇ ಈಗ ಸ್ನೇಹಿತರೊಂದಿಗೆ ಸೇರಿ ಅತ್ಯಾಚಾರ ನಡೆಸಿದ್ದಾನೆ.
ಈತ ಹಲವರೊಂದಿಗೆ ಸ್ವಿಂಗರ್ಸ್ ಟೀಂ ಎಂಬ ವಾಟ್ಸಾಪ್ ಗ್ರೂಪ್ ಮಾಡಿಕೊಂಡಿದ್ದ. ಈ ಗುಂಪಿನ ಸ್ನೇಹಿತರೆಲ್ಲ ಸೇರಿ ಬೆಂಗಳೂರು ಹೊರ ವಲಯದಲ್ಲಿ ಪಾರ್ಟಿ ಆಯೋಜಿಸಿದ್ದರು. ಪಾರ್ಟಿಗೆ ಕಪಲ್ಸ್ ಜೊತೆಗೆ ಬರುತ್ತಿದ್ದ ಈ ಕಾಮುಕರು, ಪಾರ್ಟಿಯಲ್ಲಿ ಪರಸ್ಪದ ಪ್ರಿಯತಮೆಯರ ಎಕ್ಸ್ ಚೇಂಜ್ ಮಾಡಿಕೊಳ್ಳುವ ಟಾಸ್ಕ್ ನೀಡುತ್ತಿದ್ದರು ಎನ್ನಲಾಗಿದೆ. ಒಬ್ಬನ ಗರ್ಲ್ ಫ್ರೆಂಡ್ ಜೊತೆಗೆ ಮತ್ತೊಬ್ಬ ಬೆಡ್ ಶೇರ್ ಮಾಡುವುದು ಆ ಟಾಸ್ಕ್. ಇದೇ ರೀತಿ ಹರೀಶ್, ತಾನು ಪ್ರೀತಿಸುತ್ತಿದ್ದ ಯುವತಿಗೂ ಬೇರೊಬ್ಬರೊಂದಿಗೆ ಬೆಡ್ ಶೇರ್ ಮಾಡುವಂತೆ ಒತ್ತಾಯಿಸಿದ್ದಾನೆ.
ಇದಕ್ಕೆ ಒಪ್ಪದಿದ್ದಾಗ ಸ್ನೇಹಿತರ ಜೊತೆಗೆ ಸೇರಿ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ. ಈ ಘಟನೆಯಿಂದ ಬೇಸತ್ತ ಯುವತಿ ಸಿಸಿಬಿಗೆ ದೂರು ನೀಡಿದ್ದಾಳೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಹಲವಾರು ಭಯಾನಕ ವಿಷಯಗಳು ಬಹಿರಂಗವಾಗಿವೆ. ಮೊಬೈಲ್ ನಲ್ಲಿ ಹತ್ತಾರು ಯುವತಿಯರ ಬೆತ್ತಲೆ ಫೋಟೊ ಪತ್ತೆಯಾಗಿವೆ. ಏಕಾಂತದಲ್ಲಿದ್ದ ವಿಡಿಯೋಗಳನ್ನು ಮಾಡಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದರು ಎನ್ನಲಾಗಿದೆ. ಸದ್ಯ ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.