ಭುವನೇಶ್ವರ: ಬಿಜೆಪಿ ಜೊತೆ ಮೈತ್ರಿ ಮಾಡುವುದಿಲ್ಲ. ನಾವೇನಿದ್ದರೂ ವಿರೋಧ ಪಕ್ಷದವರು ಎಂದು ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ (Naveen Patnaik) ಹೇಳಿದ್ದಾರೆ.
ಬಿಜು ಜನತಾ ದಳ (Biju Janata Dal) ಮಾಜಿ ಮಿತ್ರ ಬಿಜೆಪಿ ನೇತೃತ್ವದ ಮೋದಿ (Modi) ಸರ್ಕಾರದ ಮೊದಲ ಎರಡು ಅವಧಿಯಲ್ಲಿ ಪ್ರಮುಖ ಮಸೂದೆಗಳನ್ನು ಅಂಗೀಕರಿಸಲು ಸಹಾಯ ಮಾಡಿತ್ತು. ಆದರೆ, ಈಗ ಮೈತ್ರಿ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಬಿಜೆಡಿ ಸಂಸದರು ರಾಜ್ಯದ ಅಭಿವೃದ್ಧಿ ಮತ್ತು ಒಡಿಶಾದ ಜನರ ಕಲ್ಯಾಣಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಪ್ರಸ್ತಾಪಿಸುತ್ತಾರೆ. ಸಂಸತ್ತಿನಲ್ಲಿ ಒಡಿಶಾದ 4.5 ಕೋಟಿ ಜನರ ಧ್ವನಿಯಾಗುತ್ತೇವೆ ಎಂದು ನವೀನ್ ಪಟ್ನಾಯಕ್ ಹೇಳಿದ್ದಾರೆ.
ಚಂದ್ರಬಾಬು ನಾಯ್ಡು ಅವರ ಟಿಡಿಪಿ ಬಿಜೆಪಿಗೆ ಬೆಂಬಲ ನೀಡಿದ್ದರಿಂದ ಬಿಜೆಡಿ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ವೈಎಸ್ಆರ್ ಕಾಂಗ್ರೆಸ್ನ ಅಗತ್ಯ ಬಿಜೆಪಿಗೆ ಬೀಳಲಿಲ್ಲ. BJD ಯ ಬೆಂಬಲವು ದೆಹಲಿ ಸೇವಾ ಮಸೂದೆಯನ್ನು ಜಾರಿಗೆ ತರಲು ಬಿಜೆಪಿಗೆ ಸಹಾಯ ಮಾಡಿದ್ದು, ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ವಿಫಲಗೊಳಿಸಿತು. ತ್ರಿವಳಿ ತಲಾಖ್ ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಮಸೂದೆಯಂತಹ ಕಾನೂನುಗಳನ್ನು ಅಂಗೀಕರಿಸಲಾಯಿತು.