ಹುಬ್ಬಳ್ಳಿ : ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ನಾಯಕರ ಜೊತೆ ಹುಷಾರಾಗಿರಬೇಕು. ನಿಮ್ಮಿಂದ ಕೆಟ್ಟ ಕೆಲಸ ಮಾಡಿ ವಿಡಿಯೋ ಮಾಡಿಟ್ಟುಕೊಳ್ಳುತ್ತಾರೆ. ಪಕ್ಷ ಬಿಟ್ಟಾಗ ಆ ವಿಡಿಯೋ ಹರಿಬಿಟ್ಟು, ಕಾರ್ಯಕರ್ತರನ್ನೇ ಬ್ಲ್ಯಾಕ್ ಮೇಲ್ ಮಾಡ್ತಾರೆ. ಕಾಂಗ್ರೆಸ್ ನಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲಾ ಎಂದು ಛಲವಾದಿ ನಾರಾಯಣ ಸ್ವಾಮಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ವರದಿಗಾರರೊಂದಿಗೆ ಮಾತನಾಡಿದ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಮಹಿಲೆಯನ್ನ ವಿವಸ್ತ್ರಗೊಳಿಸಿ ಇಡೀ ದೇಶದಲ್ಲಿ ತಲೆತಗ್ಗಿಸೋಹಾಗಾಗಿದೆ. ರಾಷ್ಟ್ರ ಮಟ್ಟದಲ್ಲಿ ಮರ್ಯಾದೆ ಹಾಳಾಗಿ ಹೋಗಿದೆ. ರಾಷ್ಟ್ರೀಯ ಮಹಿಳಾ ಆಯೋಗ ಕೂಡಾ ದೂರು ದಾಖಲಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ನಾವು ಇಂದು ಬಂದಿದ್ದೇವೆ ಎಂದಿದ್ದಾರೆ.
ಇಂದು ಮೂರು ವರ್ಷದ ಹಿಂದಿನ ವಿಡಿಯೋ ವೈರಲ್ ಮಾಡಿದ್ದಾರೆ. ಪಾಲಿಕೆ ಸದಸ್ಯೆ ಸುವರ್ಣಾ ಕಲಕುಂಟ್ಲಾ ಜೊತೆ ಇದ್ದಾಗ ನಡೆದಿದ್ದ ಘಟನೆ ಅದು. ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ನಾಯಕರ ಜೊತೆ ಹುಷಾರಾಗಿರಬೇಕು. ನಿಮ್ಮಿಂದ ಕೆಟ್ಟ ಕೆಲಸ ಮಾಡಿ ವಿಡಿಯೋ ಮಾಡಿಟ್ಟುಕೊಳ್ಳುತ್ತಾರೆ. ಪಕ್ಷ ಬಿಟ್ಟಾಗ ಆ ವಿಡಿಯೋ ಹರಿಬಿಡ್ತಾರೆ. ಕಾರ್ಯಕರ್ತರನ್ನೇ ಬ್ಲ್ಯಾಕ್ ಮೇಲ್ ಮಾಡ್ತಾರೆ. ಕಾಂಗ್ರೆಸ್ ನಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲಾ, ಕಾಂಗ್ರೆಸ್ ಕಾರ್ಯಕರ್ತರು ಈ ಬಗ್ಗೆ ಹುಷಾರಾಗಿರಬೇಕು. ಪ್ರಕರಣ ಸಾಧಕ ಬಾಧಕಗಳೇನು ಅನ್ನೋದನ್ನು ತಿಳಿಯಲು ಬಂದಿದ್ದೇವೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ರೆ ಸಾಲದು, ತಪ್ಪಿತಸ್ಥರನ್ನು ಅಮಾನತು ಮಾಡಬೇಕು ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ಹುಬ್ಬಳ್ಳಿ ಬಿಜೆಪಿ ಕಾರ್ಯಕರ್ತೆ ವಿವಸ್ತ್ರಗೊಳಿಸಿದ ಕೇಸ್ | ಕೇಶ್ವಾಪುರ ಠಾಣೆ ಇನ್ಸ್‌ಪೆಕ್ಟರ್ ವರ್ಗಾವಣೆ



















