ಮದುವೆ ಅಡುಗೆಯಲ್ಲಿ ಪನ್ನೀರ್ ಖಾದ್ಯ ಇಲ್ಲದ್ದಕ್ಕೆ ಗಂಡಿನ ಕಡೆಯವರು ರೊಚ್ಚಿಗೆದ್ದ ಘಟನೆ ನಡೆದಿದೆ.
ಉತ್ತರ ಪ್ರದೇಶದ ಚಾಂಡೋಲಿ ಜಿಲ್ಲೆಯಲ್ಲಿ ವಿವಾಹ ನಿಗದಿಯಾಗಿತ್ತು. ಗಂಡಿನ ಕಡೆಯವರೊಟ್ಟಿಗೆ ಹಾಜರಾಗಿದ್ದ ಓರ್ವ, ಮಂಟಪಕ್ಕೆ ಬರುತ್ತಿದ್ದಂತೆ ಊಟಕ್ಕೆ ಮುಂದಾಗಿದ್ದಾನೆ. ಅಷ್ಟೇ, ಖಾದ್ಯಗಳ ಪಟ್ಟಿಯಲ್ಲಿ ಪನ್ನೀರ್ ಇಲ್ಲದ್ದನ್ನು ಗಮನಿಸಿದ ಧರ್ಮೇಂದ್ರ ಯಾದವ್ ಗರಂ ಆಗಿದ್ದಾನೆ. ಅಷ್ಟೇ ಅಲ್ಲಾ ದಿಬ್ಬಣ ಬಂದಿದ್ದ ಟೆಂಪೋವನ್ನೇ ನೇರ ಮದುವೆ ಮಂಟಪಕ್ಕೆ ನುಗ್ಗಿಸಿದ್ದಾನೆ.
ಈ ದುರ್ಘಟನೆಯಲ್ಲಿ ಮೂವರಿಗೆ ಗಾಯಗಳಾಗಿದ್ದು, 3 ಲಕ್ಷ ಮೌಲ್ಯದ ಹಾನಿ ಸಂಭವಿಸಿದೆ. ಗಂಡಿನ ಕಡೆಯವನ ಈ ವರ್ತನೆ ವಿರುದ್ಧ ಸಿಡಿದೆದ್ದ ವಧುವಿನ ಸಂಬಂಧಿಕರು, ಟೆಂಪೋ ನುಗ್ಗಿಸಿದವನ ವಿರುದ್ಧ ಎಫ್ ಐಆರ್ ಆಗುವವರೆಗೂ ತಾಳಿ ಕಟ್ಟಲು ಬಿಡುವುದಿಲ್ಲ ಅಂತಾ ಪಟ್ಟು ಹಿಡಿದಿದ್ದರು. ಅಂತಿಮವಾಗಿ ರಾತ್ರಿ 12ಕ್ಕೆ ಕೇಸ್ ದಾಖಲಾಗಿ ಮರುದಿನ ಹೊಸ ಮುಹೂರ್ತದಲ್ಲಿ ರಾಜನಾಥ್ ಯಾದವ್ ಸಪ್ತಪದಿ ತುಳಿದಿದ್ದಾರೆ.



















