ಬೆಂಗಳೂರು: ಕಾಂಗ್ರೆಸ್ ಸರ್ಕಾರ ಮಾಡುತ್ತಿರುವುದು ಜಾತಿಗಣತಿ ಅಲ್ಲ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯಾಗಿದೆ ಎಲ್ಲ ವರ್ಗದವರಿಗೂ ಸಮಾನತೆ ಕೊಡಲು ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಅವಶ್ಯವಾಗಿದೆ ಎಂದುಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಶಿಕ್ಷಕರಿಗೆ ದಸರಾ ಹಬ್ಬ ಮಾಡಲು ಅವಕಾಶ ಕೊಡದೇ ಸಮೀಕ್ಷೆ ಮಾಡಿಸುತಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಬೆಂಗಳೂರಿನಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಮಧು ಬಂಗಾರಪ್ಪ, ಶಿಕ್ಷಕರನ್ನು ಬಳಸದ ಹೊರತು ನಮಗೆ ಪರ್ಯಾಯ ವ್ಯವಸ್ಥೆಯೇ ಇಲ್ಲ. ಸರ್ವೆಗೆ ನಾವು ಶಿಕ್ಷರನ್ನು ದಸರಾ ರಜೆಯಲ್ಲಿ ಬಳಸಿಕೊಳ್ಳುತ್ತಿದ್ದೇವೆ. ಬಿಜೆಪಿಯವರು ಸುಮ್ಮನೆ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಶಿಕ್ಷಕರ ಮೇಲೆ ಬೇರೆ ಬೇರೆ ಕೆಲಸಗಳ ಒತ್ತಡವೂ ಇದೆ ಎಂದು ನಮಗೂ ಗೊತ್ತಿದೆ, ಆದರೆ ಸಮೀಕ್ಷೆ ಅರ್ಥಪೂರ್ಣವಾಗಿ ಆಗಬೇಕಿರುವುದರಿಂದ ಸರ್ವೆಗೆ ಶಿಕ್ಷಕರನ್ನು ಬಳಿಸಿಕೊಳ್ಳಿದ್ದೇವೆಂದು ಸಮರ್ಥಿಸಿಕೊಂಡರು. ನಾನು ಈಗಾಗಲೇ ಶಿಕ್ಷಕರ ಸಂಘಟನೆಗಳ ಜೊತೆ ಮಾತನಾಡಿದ್ದು ಮನವರಿಕೆ ಕೂಡ ಮಾಡಿದ್ದೇವೆ ಶಿಕ್ಷಕರಿಗೆ ಸಮೀಕ್ಷೆ ಚೆನ್ನಾಗಿ ಮಾಡಿಕೊಡಿ, ಸಹಕಾರ ಕೊಡಿ ಎಂದು ಮನವಿ ಮಾಡಿಕೊಂಡಿದ್ದೇವೆ. ಶಿಕ್ಷಕರು ಸಹ ಅವರ ಹಕ್ಕು ಎಂದು ಭಾವಿಸಿ ಸಮೀಕ್ಷೆ ಮಾಡಬೇಕು. ಮನೆ ಬಳಿ ಬರುವ ಶಿಕ್ಷಕರಿಗೆ ಜನರೂ ಕೂಡ ಸಹಕಾರ ಕೊಡಬೇಕು. ಶಿಕ್ಷಕರಿಗೆ ಎಂದು ದಸರಾ ರಜೆ ಕೆಲ ದಿನ ವಿಸ್ತರಣೆ ಮಾಡುವುದು ಈ ಹಂತದಲ್ಲಿ ಕಷ್ಟ, ದಸರಾ ರಜೆ ವಿಸ್ತರಣೆ ಪ್ರಸ್ತಾಪ ಇಲ್ಲ, ದಸರಾ ಮುಗಿಯುತ್ತಿದ್ದ ಹಾಗೆ ಶಾಲೆಗಳು ಪ್ರಾರಂಭ ಆಗುತ್ತವೆ ಎಂದು ತಿಳಿಸಿದ್ದಾರೆ