ಬೆಂಗಳೂರು: ನಮ್ಮಲ್ಲಿ ಹೆಜ್ಜೆಗೊಂದರಂತೆ ಬ್ಯಾಂಕ್ ಗಳು, ಎಟಿಎಂಗಳು ಸಿಗುವುದು ಸಹಜ. ಆದರೆ, ಇಲ್ಲೊಂದು ದೇಶವಿದೆ. ಈ ದೇಶದಲ್ಲಿ ಎಟಿಎಂಗಳೇ ಇಲ್ಲಾ ಅಂದ್ರೆ ನಂಬುತ್ತೀರಾ? ಅಚ್ಚರಿಯಾದರೂ ಇದು ನೂರಕ್ಕೆ ನೂರು ಸತ್ಯ.
ಹೌದು! ಇದು ನೂರಕ್ಕೆ ನೂರರಷ್ಟು ಸತ್ಯ. ವಿಶ್ವದ ಅತ್ಯಂತ ಪುಟ್ಟ ದೇಶಗಳ ಸಾಲಿಗೆ ಸೇರಿರುವ ಟುವಾಲು ದ್ವೀಪದಲ್ಲಿ ಇವತ್ತಿಗೂ ಒಂದೇ ಒಂದು ಎಟಿಎಂ ಇಲ್ಲ. ಅಷ್ಟೇ ಅಲ್ಲಾ ಈ ಸಮಸ್ತ ದೇಶಕ್ಕೆ ಇರೋದು ಕೂಡಾ ಒಂದೇ ಒಂದು ಬ್ಯಾಂಕ್ ಎನ್ನುವುದು ಕೂಡ ನಿಜ.
ಟುವಾಲು ಅತ್ಯಂತ ಪುಟ್ಟ ರಾಷ್ಟ್ರ. 11 ರಿಂದ 12 ಸಾವಿರ ಈ ದೇಶದ ಒಟ್ಟು ಜನಸಂಖ್ಯೆ. ಸರಿಸುಮಾರು 26 ಚದುರ ಕಿಲೋಮೀಟರ್ ಈ ದೇಶದ ಒಟ್ಟು ವಿಸ್ತೀರ್ಣ. ಆಸ್ಟ್ರೇಲಿಯಾದ ಸನಿಹದಲ್ಲಿರುವ ಈ ರಾಷ್ಟ್ರದಲ್ಲಿ ಕೇವಲ ಒಂದೇ ಒಂದು ಬ್ಯಾಂಕ್ ಇದೆ. ಇನ್ನು ಇಲ್ಲಿನ ಜನರ ವಹಿವಾಟು ಸಂಪೂರ್ಣ ನಗದು ರೂಪದಲ್ಲೇ ನಡೆಯುತ್ತದೆ ಎನ್ನುವುದು ವಿಶೇಷ. ಈ ರಾಷ್ಟ್ರದ ಪ್ರಮುಖ ಆದಾಯ ಮೂಲವೆಂದರೆ ಅದು ಮೀನುಗಾರಿಕೆ. ಬಹುತೇಕ ಇಲ್ಲಿನ ನಿವಾಸಿಗಳು ಮೀನುಗಾರಿಕೆಯಿಂದಲೇ ತಮ್ಮ ಜೀವನಾದಾಯ ಗಳಿಸುತ್ತಿದ್ದಾರೆ. ಇಂದಿನ ಡಿಜಿಟಲ್ ಕಾಲದಲ್ಲೂ ಟುವಾಲು ರಾಷ್ಟ್ರವಾಸಿಗಳು ನಗದು ವಹಿವಾಟು ನಡೆಸುವುದಲ್ಲದೆ, ಕೇವಲ ಒಂದೇ ಒಂದು ಬ್ಯಾಂಕ್ ಮೂಲಕ ಪಹಿವಾಟು ಮಾಡುತ್ತಿರುವುದು ಆಶ್ಚರ್ಯವೇ ಸರಿ.