ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಬೆಂಗಳೂರಂತಹ ಸಿಟಿಗಳಲ್ಲಿ ಕಳ್ಳತನದ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದೇ ರೀತಿ ಇಲ್ಲೊಂದು ಕಡೆ ಫುಡ್ ಡೆಲಿವರಿ ಮಾಡುವ ಸೋಗಿನಲ್ಲಿ ಪಿಜಿಯಲ್ಲಿ ವ್ಯಕ್ತಿಯೋರ್ವ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಪಾರ್ಸೆಲ್ ಟೇಬಲ್ ಮೇಲಿಟ್ಟು ಹೋಗಲು ಯುವತಿ ಡೆಲಿವರಿ ಬಾಯ್ಗೆ ಹೇಳಿದ್ದಾಳೆ. ಆ ಫುಡ್ ಡೆಲಿವರಿ ಬಾಯ್ ಟೇಬಲ್ ಮೇಲೆ ಆರ್ಡರ್ ಇಟ್ಟು ಇತರ ವಸ್ತುಗಳನ್ನ ಕದ್ದು ಪರಾರಿಯಾಗಿದ್ದಾನೆ. ಈ ಕೃತ್ಯ ಸಿಸಿಟಿವಿಯಲ್ಲಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಳ್ಳತನದ ವಿಡಿಯೋ ನೀಡಿ ಪಿಜಿ ಮಾಲೀಕ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಸ್ಥಳದ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ.