ಚಿಕ್ಕಮಗಳೂರು: ಮಾಜಿ ಶಿಕ್ಷಣ ಸಚಿವ ಗೋವಿಂದೇಗೌಡರ ಮನೆಯಲ್ಲಿ ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ನೇಪಾಳ ಮೂಲದ ಮೂವರು ಅಂತರ್ ರಾಷ್ಟ್ರೀಯ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
1.ಕೆಜಿ 800 ಗ್ರಾಂ ಚಿನ್ನ, 1ಕೆ.ಜಿ 200 ಗ್ರಾಂ ಬೆಳ್ಳಿ ಬೆಳ್ಳಿ ಕದ್ದಿದ್ದ ನೇಪಾಳಿ ಗ್ಯಾಂಗ್ ನನ್ನು ಮಹಾರಾಷ್ಟ್ರ ಪೊಲೀಸರ ನೆರವಿನಿಂದ ಚಿಕ್ಕಮಗಳೂರು ಪೊಲೀಸರು ಬಂಧಿಸಿ, 1 ಕೆ.ಜಿ 800 ಗ್ರಾಂ ಚಿನ್ನ 1. ಕೆ.ಜಿ 200 ಗ್ರಾಂ ಬೆಳ್ಳಿ, ಎರಡು ಕಾರು ವಶಕ್ಕೆ ಪಡೆದಿದ್ದಾರೆ.
ಮಹಾರಾಷ್ಟ್ರದ ಭಿವಘಾಟ್ ಬಳಿ ಪರಾರಿಯಾಗುತ್ತಿರುವ ಬಗ್ಗೆ ಮಹಾರಾಷ್ಟ್ರ ಪೊಲೀಸರಿಗೆ ಮಾಹಿತಿ ನೀಡಿದ್ದ ಚಿಕ್ಕಮಗಳೂರು ಪೊಲೀಸರು ನೇಪಾಳ ಮೂಲದ ರಾಜೇಂದ್ರ, ಏಕೆಂದ್ರ, ಕರನ್ಸಿಂಗ್ ಬಹಾದೂರ್ ಬಂಧನವಾಗಿದ್ದು, ಜಿತೇಂದ್ರ, ಪ್ರೇಮಾ ಕುಮಾರಿ ದಂಪತಿ ಪರಾರಿಯಾಗಿದ್ದಾರೆ.
ದಿ. ಗೋವಿಂದೇಗೌಡರ ಮಗ ವೆಂಕಟೇಶ ಅವರ ಮನೆಯಲ್ಲಿ ಜಿತೇಂದ್ರ, ಪ್ರೇಮಾ ದಂಪತಿ ಕೆಲಸಕ್ಕೆ ಸೇರಿದ್ದರು.
ನೇಪಾಳದಿಂದ ರಾಜೇಂದ್ರ ಟೀಮ್ ಅನ್ನು ಕರೆಸಿ ಮನೆಯಲ್ಲಿ ಯಾರೂ ಇರದ ಸಮಯವನ್ನು ನೋಡಿಕೊಂಡು ಆ. 21ರ ರಾತ್ರಿ ಮನೆಯ ಸಿಸಿ ಕ್ಯಾಮರಾವನ್ನು ಹೊಡೆದು ಮನೆಯಲ್ಲಿ ಕಳ್ಳತನ ಮಾಡಿ ಪರಾರಿ ಆಗಿದ್ದರು.