ವಾಮನ ಚಿತ್ರದ ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ದರ್ಶನ್ (Darshan) ಅಭಿಮಾನಿಗಳು ಥಿಯೇಟರ್ ಧ್ವಂಸ ಮಾಡಿರುವುದು ದೊಡ್ಡ ಆಕ್ರೋಶಕ್ಕೆ ಕಾರಣವಾಗಿದೆ. ಈಗ ಈ ವಿಷಯವಾಗಿ ನಟ ಧನ್ವೀರ್ (Actor Dhanveer) ಕೂಡ ಮಾತನಾಡಿದ್ದಾರೆ.
ಒಳ್ಳೆಯದನ್ನು ಮಾಡುವುದರಲ್ಲಿ ಕೆಡಕು ಬಯಸುವವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಹೇಳಿದ್ದಾರೆ. ಬೆಂಗಳೂರಿನ (Bengaluru) ಥಿಯೇಟರ್‌ವೊಂದರಲ್ಲಿ ಧನ್ವೀರ್ ನಟನೆಯ ʻವಾಮನʼ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ ಇತ್ತೀಚೆಗೆ ನಡೆದಿತ್ತು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಲವು ಅಭಿಮಾನಿಗಳು ಕುರ್ಚಿ, ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಿ, ಥಿಯಟೇರ್ ಗೆ ಭಾರೀ ನಷ್ಟು ಉಂಟು ಮಾಡಿದ್ದರು. ದರ್ಶನ್ ಅಭಿಮಾನಿಗಳೇ ಈ ಕೃತ್ಯ ಎಸಗಿದ್ದಾರೆಂಬ ಆರೋಪ ಕೇಳಿ ಬಂದಿತ್ತು.
ಈ ವಿಷಯವಾಗಿ ಪ್ರತಿಕ್ರಿಯಿಸಿರುವ ನಟ ಧನ್ವೀರ್, ಕೆಡಕು ಬಯಸುವವರಿಗೂ ಒಳ್ಳೆಯದಾಗಲಿ ಎಂದಿದ್ದಾರೆ. ನಾನು ದರ್ಶನ್ ಹೃದಯ ನೋಡಿ ಅವರ ಬಳಿ ಹೋಗಿದ್ದೇನೆ. ಅವರು ಕಷ್ಟದಲ್ಲಿದ್ದಾಗ ಯಾರೂ ಬರಲಿಲ್ಲ ಎಂದಿದ್ದಾರೆ.