ಚಿಕ್ಕಬಳ್ಳಾಪುರ: ದೇಶ ಸುಭಿಕ್ಷವಾಗಿರಬೇಕು ಅಂದ್ರೆ ಅಂದ್ರೆ ಆರೋಗ್ಯವಂತ ನಾಗರೀಕರಿರಬೇಕು. ಅದಕ್ಕಾಗಿ ಪ್ರತಿ ಗ್ರಾಮದಲ್ಲೂ ಸುಸಜ್ಜಿತ ಆಸ್ಪತ್ರೆಗಳಿರಬೇಕು. ಬಡವರಿಗೆ ಸರಿಯಾದ ಆರೋಗ್ಯ ಸಿಗುತ್ತಿಲ್ಲ ಎಂಬ ಮಾತು ಹಲವಾರು ವರ್ಷಗಳಿಂದಲೂ ಕೇಳಿ ಬರುತ್ತಲೇ ಇದೆ. ಈಗ ಅಂಥವರಿಗೂ ಸಿಹಿ ಸುದ್ದಿ ಸಿಕ್ಕಿದ್ದು ಜಗತ್ತಿನ ಅತಿದೊಡ್ಡ ಉಚಿತ ಆಸ್ಪತ್ರೆ ಶೀಘ್ರ ಲೋಕಾರ್ಪಣೆಯಾಗಲಿದೆ. ಅದು ಕೂಡ ನಮ್ಮ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯಲ್ಲಿ.
ಹೌದು…ಸುಮಾರು 6,50,000 ಚದರ ಅಡಿ ವಿಸ್ತೀರ್ಣದಲ್ಲಿ ಜಗತ್ತಿನ ಅತಿ ದೊಡ್ಡ ಉಚಿತ ಆಸ್ಪತ್ರೆ ನಿರ್ಮಾಣವಾಗುತ್ತಿದೆ. 600 ಹಾಸಿಗೆಗಳ ಸಾಮರ್ಥ್ಯದ ಈ ಆಸ್ಪತ್ರೆಯಲ್ಲಿ 28 ವೈದ್ಯಕೀಯ ವಿಭಾಗಗಳು ಕಾರ್ಯನಿರ್ವಹಿಸಲಿವೆ. ಇನ್ನೋಂದು ಸ್ಪೆಷಾಲಿಟಿ ಏನಂದ್ರೆ ಈ ಆಸ್ಪತ್ರೆಯಲ್ಲಿ ಬಿಲ್ಲಿಂಗ್ ಕೌಂಟರ್ ಇರುವುದಿಲ್ಲ ಮತ್ತು ಎಲ್ಲರಿಗೂ ಉಚಿತ ಆರೋಗ್ಯ ಸೇವೆ ದೊರೆಯಲಿದೆ. ಮೊದಲ ಬಾರಿಗೆ ಜಗತ್ತಿನ ಎಲ್ಲ ಭಾಗದ ಎಲ್ಲ ಜನರಿಗೂ ಉಚಿತವಾಗಿ ವೈದ್ಯಕೀಯ ಸೇವೆ ಒದಗಿಸುವ ಬೃಹತ್ ಕಟ್ಟಡ ತಲೆ ಎತ್ತಲಿದೆ.
ಸುಮಾರು 5 ಎಕರೆ ಪ್ರದೇಶದಲ್ಲಿ ತಲೆ ಎತ್ತುತ್ತಿರುವ ಈ ಆಸ್ಪತ್ರೆ ನೆಲಮಹಡಿ, ತಳಮಹಡಿ ಹಾಗೂ 5 ಮಹಡಿಗಳನ್ನು ಒಳಗೊಂಡಿದೆ. 600 ಹಾಸಿಗೆ ಸಾಮರ್ಥ್ಯದಲ್ಲಿ 100 ಐಸಿಯು ಬೆಡ್‌ಗಳು ಇರಲಿವೆ. 11 ಆಪರೇಷನ್ ಥಿಯೇಟರ್‌ಗಳನ್ನು ಈ ಆಸ್ಪತ್ರೆ ಸಮುಚ್ಚಯ ಒಳಗೊಂಡಿದೆ.
ಇದರೊಂದಗೆ ರೆ ಈ ಆಸ್ಪತ್ರೆಯ ದೊಡ್ಡ ಗೋಪುರದ ಮೇಲೆ ಆರೋಗ್ಯ ದೇವತೆ ಎಂದೇ ಹೆಸರಾಗಿರುವ ಧನ್ವಂತರಿ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದೆ. ಸುಮಾರು 20 ಎತ್ತರದ ಧನ್ವಂತರಿ ಮೂರ್ತಿಯನ್ನು ಗೋಪುರದ ಮೇಲೆ ಪ್ರತಿಷ್ಠಾಪಿಸಲಾಗುತ್ತಿದೆ. ಆರೋಗ್ಯ ದೇವತೆಯ ರಕ್ಷೆಯ ಪರಿಕಲ್ಪನೆಯಲ್ಲಿ ಆಸ್ಪತ್ರೆ ನಿರ್ಮಾಣವಾಗುತ್ತಿದ್ದು, ಕುತೂಹಲ ಕೆರಳಿಸಿದೆ.