ಧಾರವಾಡದ | ಧಾರವಾಡ ಜೈನ್ ಮಂದಿರದಲ್ಲಿ ಮತ್ತೆ ಖದೀಮರು ಕೈಚಳಕ ತೋರಿದ್ದಾರೆ. ನಗರದ ಟಿಕಾರೆ ರಸ್ತೆಯಲ್ಲಿ ಇರುವ ಜೈನ್ ಮಂದಿರದಲ್ಲಿ ಬಂಗಾರ, ಬೆಳ್ಳಿಮೂರ್ತಿಗಳು ಹಾಗೂ ಹುಂಡಿಯಲ್ಲಿನ ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ಕೂಡ ಕಳ್ಳತನ
ಕಳೆದ ಎರಡು ತಿಂಗಳ ಹಿಂದೆ ಕೂಡ ಇದೇ ಮಂದಿರದಲ್ಲಿ ಕಳ್ಳತನವಾಗಿತ್ತು. ಮಂದಿರಕ್ಕೆ ಬಂದ ಕಳ್ಳನೋರ್ವ ಮೊದಲಿಗೆ ಸಿಸಿಟಿವಿ ಕ್ಯಾಮೆರಾದ ಕೇಬಲ್‌ಗಳನ್ನು ಕಟ್ ಮಾಡಿ, ಆನಂತರ ದೇವಸ್ಥಾನದಲ್ಲಿದ್ದ ಅಂದಾಜು 7 ಲಕ್ಷ ಮೌಲ್ಯದ ಬೆಳ್ಳಿಯ ಸಾಮಾನುಗಳನ್ನು ಚೀಲದಲ್ಲಿ ತುಂಬಿಟ್ಟಿದ್ದ. ನಂತರ ಹುಂಡಿಯಲ್ಲಿದ್ದ ಹಣವನ್ನೂ ಚೀಲದಲ್ಲಿ ತುಂಬಿ ಹಣದ ಚೀಲವನ್ನು ಮಾತ್ರ ಹೊತ್ತೊಯ್ದಿದ್ದನು.
ಅಂದಾಜು 5 ಲಕ್ಷ ನಗದನ್ನು ತನ್ನ ಚೀಲದಲ್ಲಿ ತುಂಬಿ ಹೊತ್ತೊಯ್ದಿರುವ ಕಳ್ಳ, ಬೆಳ್ಳಿಯ ಸಾಮಾನುಗಳನ್ನು ಎತ್ತಿಕೊಂಡು ಹೋಗಲಾಗದೇ ಅವುಗಳನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದ. ಇದೀಗ ಮತ್ತೆ ಬಂಗಾರ, ಬೆಳ್ಳಿಮೂರ್ತಿಗಳು ಹಾಗೂ ಹುಂಡಿಯಲ್ಲಿನ ಹಣವನ್ನು ಕಳ್ಳತನ ಮಾಡಿದ್ದಾರೆ.
ಸದ್ಯ ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನಾ ಸಂಬಂಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಖದೀಮರಿಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ : ಸ್ನೇಹಿತೆಯ ಪ್ರಿಯಕರನ ಕಾಲ್ ರಿಸೀವ್ ಮಾಡಿದ್ದಕ್ಕೆ ಪತ್ನಿಯನ್ನೇ ಕೊಂದ ಪತಿ?



















