ಬೆಂಗಳೂರು: ಬೆಂಗಳೂರಿನಲ್ಲಿ ಇತ್ತೀಚೆಗೆ ಪುಂಡರ ಹಾವಳಿ ಹೆಚ್ಚಾಗುತ್ತಿದೆ. ಪುಂಡನೊಬ್ಬ ರಾಜಾರೋಷವಾಗಿ ಲಾಂಗ್ ತೋರಿಸಿ, ಬೆದರಿಕೆ ಹಾಕಿ ಅಂಗಡಿಯವನಿಂದ ತನಗೆ ಬೇಕಾದ್ದು ಪಡೆದಿರುವ ಘಟನೆ ನಡೆದಿದೆ.
ಇದನ್ನು ನೋಡಿದರೆ ಅಮಾಯಕರ ಸ್ಥಿತಿ ಏನು? ಎಂಬ ಭಯ ಶುರುವಾಗುತ್ತಿದೆ. ಇತ್ತೀಚೆಗೆ ಬೇಕರಿಗೆ ನುಗ್ಗಿ ಧಾಂದಲೆ ಮಾಡುತ್ತಿರುವ ಹಾಗೂ ಬೆದರಿಸುವ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿವೆ.
ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಪುಂಡ- ಪೋಕರಿಗಳಿಗೆ ಸ್ವಲ್ಪವೂ ಭಯ ಇಲ್ಲದಂತಾಗುತ್ತಿದೆ. ಆಡುಗೋಡೆ ಪೊಲೀಸ್ ಠಾಣೆಯಲ್ಲಿ ಪುಂಡನೊಬ್ಬ ಅಂಗಡಿಗೆ ಬಂದು ಲಾಂಗ್ ತೋರಿಸಿ ಫ್ರೀಯಾಗಿ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾನೆ.
ಫ್ರೀಯಾಗಿ ಕೊಡುವುದಿಲ್ಲ ಅಂದಿದ್ದಕ್ಕೆ ಲಾಂಗ್ ತೋರಿಸಿ ಅವಾಜ್ ಹಾಕಿದ್ದಾನೆ. ಕೋರಮಂಗಲ(Koramangala) 80 ಫೀಟ್ ರೋಡ್ ಸೆಕೆಂಡ್ ಸ್ಟೇಜ್ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದೆ. ಅಂಗಡಿಯಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.