ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ನಡೆದಿರುವ ಸರಣಿ ಕೊಲೆ, ಅತ್ಯಚಾರದ ವಿರುದ್ಧ ಹಾಗೂ ಸೌಜನ್ಯ ಪರ ಹೋರಾಟಗಾರರಿಗೆ ನ್ಯಾಯ ಸಿಗಲಿ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದ ಶ್ರೀಗಳು ಆಶೀರ್ವಾದ ಮಾಡಿದ ಅಮೃತ ಘಳಿಗೆ ಇದಾಗಿದೆ ಎಂದು ಗಿರೀಶ್ ಮಟ್ಟಣ್ಣನವರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಗುರುಗಳು, ಚಿನ್ನಯ್ಯನಿಗೆ ಮತ್ತು ನಮ್ಮೆಲ್ಲ ಹೋರಾಟಗಾರರಿಗೆ ಒಕ್ಕಲಿಗ ಮಹಾಸಂಸ್ಥಾನದ ಕಾಲಭೈರವನ ದರ್ಶನದ ನಂತರ ತಮ್ಮ ಪೀಠದಲ್ಲಿ ಕುಳಿತು ಸೌಜನ್ಯ ಹೋರಾಟಕ್ಕೆ ನ್ಯಾಯ ಸಿಗಲಿ ಎಂದು ಆಶೀರ್ವಾದ ಮಾಡಿ, ಅಭಯ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

https://www.instagram.com/p/DSFKmzoD45m/?igsh=ZG1jYjR3dXdjZXRq
ದಂಗಾಗಿ ಹೋದ ಶ್ರೀಗಳು:
ಸೌಜನ್ಯ ಅತ್ಯಾಚಾರ ಕೊಲೆ ಅಷ್ಟೇ ಅಲ್ಲ, ಧರ್ಮಸ್ಥಳದಲ್ಲಿ ತಾನು ಅತ್ಯಾಚಾರ ಕೊಲೆಯಾಗಿ ಶವವಾದ ಅನೇಕ ದೇಹಗಳನ್ನು ಅಕ್ರಮವಾಗಿ ಹೂತು ಹಾಕಿದ ವಿವರಗಳನ್ನು ಚಿನ್ನಯ್ಯ ಸ್ವತಃ ನಿರ್ಮಲಾನಂದ ಶ್ರೀಗಳ ಎದುರು ಎಳೆ ಎಳೆಯಾಗಿ ಬಿಚ್ಚಿಟ್ಟಾಗ ಶ್ರೀಗಳು ದಂಗಾಗಿ ಹೋದರು. ಸೌಜನ್ಯ ಒಕ್ಕಲಿಗ ಹೆಣ್ಣು ಮಗು, ಅವಳಿಗಷ್ಟೇ ಅಲ್ಲ. ಎಲ್ಲ ಸಮಾಜದ ಅಮಾಯಕ ಜೀವಿಗಳಿಗೂ ನ್ಯಾಯ ಸಿಗಬೇಕು. ನಿಮ್ಮ ಹೋರಾಟದ ಜೊತೆಗೆ ನಾವಿದ್ದೇವೆ, ಮಠ ಇದೆ. ನಾಳೆಯೇ ಸಿಎಂ ಅವರನ್ನು ಭೇಟಿಯಾಗಲಿದ್ದೇನೆ ಮತ್ತು ಅವರಿಗೆ ಈ ವಿಷಯ ತಿಳಿಸಿ ನೊಂದವರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಕಾಲ ಭೈರವ ವಾರವಾದ ರವಿವಾರ ಕಾಲಭೈರವ ನಿಮ್ಮ ರಕ್ಷಣೆಗೆ ಇದ್ದಾನೆ, ಧೈರ್ಯವಾಗಿರಿ ಎಂದು ಅಭಯಹಸ್ತ ನೀಡಿದ್ದರು ಎಂದು ಹೇಳಿದ್ದಾರೆ.

ಯಾವುದು ಷಡ್ಯಂತ್ರ?
1)ಪ್ರಭಾವಿ ಒಕ್ಕಲಿಗ ರಾಜಕೀಯ ನಾಯಕರು ಎಂದೆನಿಸಿಕೊಂಡವರು ಒಕ್ಕಲಿಗ ಮಗಳು ಸೌಜನ್ಯಾಳಿಗೆ ನ್ಯಾಯ ಕೊಡಿಸದೇ ಪ್ರಭಾವಿ ಕೊಲೆಗಡುಕ ಕುಟುಂಬ ಜೊತೆ ಕೈಜೋಡಿಸಿದಾಗ, ಸಾತ್ವಿಕ ಶಕ್ತಿಯ ಸ್ವಾಮಿಜಿಗಳು ಹೋರಾಟಕ್ಕೆ ಆಶೀರ್ವಾದ ಮಾಡುವುದು ಷಡ್ಯಂತ್ರವೇ?
2) ಭೀಕರ ಕೊಲೆ ಅತ್ಯಾಚಾರದ ಒಕ್ಕಲಿಗ ಕುಟುಂಬ ಹೋರಾಟಗಾರರ ಜೊತೆಗೆ ನ್ಯಾಯಕ್ಕೆ ಅಂಗಲಾಚಿ ಒಕ್ಕಲಿಗ ಶ್ರೀಗಳಿಗೆ ಬೇಡಿಕೊಳ್ಳುವುದರಲ್ಲಿ ಏನು ತಪ್ಪಿದೆ? ಅದು ಷಡ್ಯಂತ್ರವೇ?
3) ಒಕ್ಕಲಿಗ ಹೆಣ್ಣುಮಗಳಿಗೆ ನ್ಯಾಯ ಸಿಗಲಿ ಅದಕ್ಕೆ ನಾನು ಪ್ರಾಮಾಣಿಕ ಪ್ರಯತ್ನ ಪಡುತ್ತೇನೆ, ಧೈರ್ಯವಾಗಿರಿ ಎಂದ ಸ್ವಾಮೀಜಿ ಮಾತಿನಲ್ಲಿ ಯಾವ ತಪ್ಪು ಇದೆ? ಅದು ಷಡ್ಯಂತ್ರವೇ? ಎಂದು ಪ್ರಶ್ನಿಸಿದ್ದಾರೆ.
ಧರ್ಮಸ್ಥಳದ ಸರಣಿ ಕೊಲೆ ಅತ್ಯಾಚಾರ ಹತ್ಯಾಕಾಂಡ ನೋಡಿಕೊಂಡು ರಾಜಕೀಯ ನಾಯಕರು ಮೂಕರಾಗಿ ಕಿವುಡರಾಗಿದ್ದಾಗ, ನ್ಯಾಯದ ಭಗೀರಥ ತಿಮರೋಡಿ ಅವರಿಗೆ ನ್ಯಾಯದ ಅಭಯ ಹೇಳಿದ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರಿಗೆ ನಮ್ಮಲ್ಲರ ಇಡೀ ಮನುಕುಲದ ಹೆಮ್ಮೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಸ್ತೆ ಗುಂಡಿ ಮುಚ್ಚಲು ಖಾಸಗಿ ಮೊರೆ ಹೋದ ಜಿಬಿಎ | ಪಾಟ್ ಹೋಲ್ ಮುಚ್ಚಲಾಗದೆ ಕೈ ಚೆಲ್ಲಿತಾ ಗ್ರೇಟರ್ ಪ್ರಾಧಿಕಾರ?



















