ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಕಾವು ಜೋರಾಗಿದ್ದು, ಇಡೀ ವಿಶ್ವವೇ ಅಮೆರಿಕದತ್ತ ಚಿತ್ತ ನೆಟ್ಟಿದೆ. ಈ ಮಧ್ಯೆ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೇ ಮೊದಲ ಬಾರಿಗೆ ಮುಖಾಮುಖಿ ಚರ್ಚೆ ನಡೆಸಲಿದ್ದಾರೆ.
ವೈಟ್ ಹೌಸ್ ನ ಗದ್ದುಗೆ ಹಿಡಿಯುವ ತವಕದಲ್ಲಿ ಇಬ್ಬರೂ ಹೋರಾಟ ನಡೆಸುತ್ತಿದ್ದಾರೆ. ಈ ಇಬ್ಬರು ಸೈದ್ಧಾಂತಿಕ ಬದ್ಧ ವಿರೋಧಿಗಳ ನಡುವೆ ಜಿದ್ದಾಜಿದ್ದಿನ ಚರ್ಚೆ ನಡೆಯುವ ನಿರೀಕ್ಷೆ ಇದೆ. ಎರಡೂ ಪಕ್ಷಗಳ ಉಮೇದವಾರರು ಸಮ್ಮತಿ ವ್ಯಕ್ತಪಡಿಸಿದ ಬಳಿಕವೇ ಸಂವಾದದ ಅಂತಿಮ ರೂಪುರೇಷೆ ಬಿಡುಗಡೆಯಾಗಿತ್ತು.
ಫಿಲೆಡೆಲ್ಫಿಯಾದ ನ್ಯಾಶನಲ್ ಕಾನ್ ಸ್ಟಿಟ್ಯೂಶನ್ ಸೆಂಟರ್ ನಲ್ಲಿ ಮಂಗಳವಾರ ಸ್ಥಳೀಯ ಸಮಯ ರಾತ್ರಿ 9 ಗಂಟೆ ಅಂದರೆ ಭಾರತೀಯ ಕಾಲಮಾನ ಬೆಳಗ್ಗೆ 6.30ಕ್ಕೆ ನಡೆಯಲಿದೆ. ಆದರೆ, ಪ್ರೇಕ್ಷಕರಾಗಿ ಯಾರೂ ಉಪಸ್ಥಿತರಿರುವುದಿಲ್ಲ. 90 ನಿಮಿಷಗಳ ಕಾಲ ನಡೆಯುವ ಈ ಸಂವಾದ ಕಾರ್ಯಕ್ರಮದಲ್ಲಿ ಎಬಿಸಿ ಕೆಯಿಂದ ಕಾರ್ಯಕ್ರಮ ನಿರೂಪಕರಾದ ಡೇವಿಡ್ ಮುಯಿರ್, ಲಿನ್ಸಿ ಡೇವಿಸ್ ಇರಲಿದ್ದಾರೆ.
ಇದೊಂದು ಗಂಭೀರ ಸಮಸ್ಯೆಯಾಗಿರುತ್ತದೆ. ಈ ಸಂವಾದದ ವೇಳೆ ಎರಡೂ ಕಡೆಯ ಮೈಕ್ ಆನ್ ಇದ್ದಲ್ಲಿ ಚರ್ಚೆಗಿಂತ ಜಗಳ, ಬೈಗುಳ ಗಳೇ ಜಾಸ್ತಿ ಇರುತ್ತವೆ. ಹೀಗಾಗಿ ಅವರವರ ಸರದಿ ಬಂದಾಗ ಮೈಕ್ ಆನ್ ಇರುತ್ತದೆ. ಹಿಂದಿನ ಬಾರಿ ಯುಎಸ್ಎ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರತಿಸ್ಪರ್ಧಿ ಟ್ರಂಪ್ ನಡುವೆ ಸಂವಾದ ನಡೆಯುತ್ತಿದ್ದ ಸಂದರ್ಭದಲ್ಲಿ ಮೈಕ್ ಆನ್ ಇಟ್ಟು ಸಮಸ್ಯೆ ಆಗಿತ್ತು. ಹೀಗಾಗಿ ಮಾತನಾಡುವ ಸರದಿ ಬಂದಾಗ ಮಾತ್ರ ಮೈಕ್ ಆನ್ ಇರುತ್ತದೆ. ಉಳಿದಂತೆ ಮೈಕ್ ಆಫ್ ಇರುತ್ತದೆ ಎನ್ನಲಾಗಿದೆ.
ಕೇಳುವ ಪ್ರಶ್ನೆಗಳನ್ನು ಅಭ್ಯರ್ಥಿಗಳಿಗೆ ಮೊದಲೇ ಕೊಡಲಾಗುವುದಿಲ್ಲ ಎಂದೂ ಎಬಿಸಿ ಮಾಹಿತಿ ನೀಡಿದೆ. ಪ್ರಶ್ನೆಗೆ 2 ನಿಮಿಷಗಳ ಕಾಲ ಉತ್ತರಿಸಲು ಸಮಯಾವಕಾಶ ಇರುತ್ತದೆ. ಇದಕ್ಕೆ ಕೌಂಟರ್ ನೀಡಲು ಎದುರಾಳಗೂ 2 ನಿಮಿಷಗಳ ಕಾಲಾವಕಾಶ ಇರುತ್ತದೆ. ನಿಯಮಾವಳಿ ಪ್ರಕಾರ ಇದಕ್ಕೂ ಸ್ಪಷ್ಟನೆ ನೀಡಲು ಹೆಚ್ಚುವರಿಯಾಗಿ 1 ನಿಮಿಷ ಇರುತ್ತದೆ. ಕೊನೆಗೆ 2 ನಿಮಿಷದ ಉಪಸಂಹಾರ ಭಾಷಣ ಮಾಡಲು ಅವಕಾಶ ನೀಡಲಾಗುತ್ತಿದೆ. ಸದ್ಯ ಈ ಸಂವಾದ ನೋಡಲು