ಬೆಂಗಳೂರು: ಐಪಿಎಲ್ ನಲ್ಲಿ ಪಂಜಾಬ್ ವಿರುದ್ಧ ಆರ್ ಸಿಬಿ ಭರ್ಜರಿ ಜಯ ಗಳಿಸಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮಿಂಚಿನ ಓಟಕ್ಕೆ ಅಭಿಮಾನಿಗಳು ದಂಗಾಗಿದ್ದಾರೆ.
ಈ ಪಂದ್ಯದಲ್ಲಿ ಆರ್ ಸಿಬಿ 7 ವಿಕೆಟ್ ಗಳ ಗೆಲುವಿನೊಂದಿಗೆ ಪಂಜಾಬ್ ವಿರುದ್ಧದ ಹಿಂದಿನ ಸೋಲಿನ ಸೇಡು ತೀರಿಸಿಕೊಂಡಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಪಂದ್ಯದಲ್ಲಿ ಅರ್ಧ ಶತಕಕ್ಕಿಂತ ಕೊಹ್ಲಿ ಬೆಂಕಿಯ ಓಟ ಅಭಿಮಾನಿಗಳನ್ನು ಸೆಳೆದಿದೆ. ವಿರಾಟ್ 4 ರನ್ ಗಾಗಿ ಓಡಿದ್ದು ಎಲ್ಲರೂ ಆಶ್ಚರ್ಯ ಪಡುವಂತಾಗಿದೆ.
36 ನೇ ವಯಸ್ಸಿನಲ್ಲೂ ಪಂಜಾಬ್ ಮುಖ್ಯ ಬೌಲರ್ ಅರ್ಶ್‌ದೀಪ್ ಸಿಂಗ್ ಎಸೆದ ಇನ್ನಿಂಗ್ಸ್ ನ ಮೂರನೇ ಓವರ್ ನ ಕೊನೆಯ ಎಸೆತದಲ್ಲಿ ಆರ್‌ಸಿಬಿ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಮಿಡ್-ವಿಕೆಟ್ ಕಡೆ ಬೌಲ್ ಅಟ್ಟಿದರು. ಫೀಲ್ಡರ್ ಚೆಂಡನ್ನು ನಿಲ್ಲಿಸಲು ಬಹಳ ದೂರದಿಂದ ಓಡಿ ಬರಬೇಕಾಯಿತು. ಅವರು ಚೆಂಡನ್ನು ಬೌಂಡರಿ ಹಗ್ಗಕ್ಕೆ ತಾಗದಂತೆ ತಮ್ಮ ಕಾಲಿನಿಂದ ತಡೆದರು, ಆದರೆ ಫೀಲ್ಡರ್ ನಿಯಂತ್ರಣ ಕಳೆದುಕೊಂಡು ಬೌಂಡರಿ ಗೆರೆ ಮೀರಿ ಮುಂದೆ ಹೋದರು.
ಆಗ ಎಲ್ಲರೂ ಬೌಲಿಂಗ್ ಸೇವ್ ಮಾಡಿದ್ದಕ್ಕೆ ಖುಷಿ ಪಟ್ಟರು. ಆದರೆ, ಪಡಿಕ್ಕಲ್ ಜೊತೆ ವಿಕೆಟ್‌ಗಳ ನಡುವೆ ವಿರಾಟ್ ಓಡುವುದನ್ನು ಕಂಡು ಸ್ಟೇಡಿಯಂ ಶಾಕ್ ಆಗಿದೆ. ಈ ವೇಳೆ ಇಬ್ಬರೂ ನಾಲ್ಕು ರನ್ ಗಳಿಸಿದರು. ಪಡಿಕ್ಕಲ್ ಅವರು ಕೊಹ್ಲಿ ಜೊತೆ ಓಡಲು ಸಾಕಷ್ಟು ಕಷ್ಟಪಟ್ಟರು. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಪಂದ್ಯದಲ್ಲಿ ಕೊಹ್ಲಿ 54 ಎಸೆತಗಳಲ್ಲಿ 7 ಫೋರ್, 1 ಸಿಕ್ಸರ್ನೊಂದಿಗೆ ಅಜೇಯ 74 ರನ್ ಗಳಿಸಿ, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ದೇವದತ್ ಪಡಿಕ್ಕಲ್ 35 ಎಸೆತಗಳಲ್ಲಿ 5 ಫೋರ್, 4 ಸಿಕ್ಸರ್ನೊಂದಿಗೆ 61 ರನ್ ಗಳಿಸಿದರು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ಟಾರ್ಗೆಟ್ ಬೆನ್ನಟ್ಟಿದ ಆರ್ಸಿಬಿ 18.5 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 159 ರನ್ ಗಳಿಸುವ ಮೂಲಕ ಜಯ ಸಾಧಿಸಿದೆ.