ಮರಳಿ ಮನಸಾಗಿದೆ ಸಿನಿಮಾ ಬಹುತೇಕ ಕರಾವಳಿಯ ಕಲಾವಿದರನ್ನು ಒಳಗೊಂಡಿರುವ ಹಾಗೂ ಕರಾವಳಿ ಭಾಗದಲ್ಲೇ ಚಿತ್ರೀಕರಣಗೊಂಡಿರುವ ಸಿನಿಮಾ ಆಗಿದೆ. ಇತ್ತೀಚೆಗೆ ಚಿತ್ರದ ಹಾಡು ಬಿಡುಗಡೆಯಾಯಿತು.
ಈ ಕಾರ್ಯಕ್ರಮ ಉಡುಪಿಯ ಯಕ್ಷಗಾನ ಕಲಾರಂಗದಲ್ಲಿ ನಡೆಯಿತು. ಚಿತ್ರದಲ್ಲಿ ಕರಾವಳಿಯ ಪ್ರಕೃತಿ ಸೊಬಗಿನ ಸುಂದರ ತಾಣಗಳನ್ನು ಅತ್ಯಂತ ನವೀರಾಗಿ ಸೆರೆಹಿಡಿಯಲಾಗಿದೆ. ಈ ಚಿತ್ರದ ಬಗ್ಗೆ ಮುಖ್ಯ ಪಾತ್ರದಲ್ಲಿ ನಟಿಸಿರುವ ಪುತ್ತೂರಿನ ಅರ್ಜುನ್ ವೇದಾಂತ್ ಮಾತನಾಡಿ, ಈಗಾಗಲೇ ತುಳು, ಕನ್ನಡ, ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿದ್ದೇನೆ. ಇದು ಕೂಡ ಉತ್ತಮವಾಗಿ ಮೂಡಿ ಬಂದಿದೆ ಎಂದಿದ್ದಾರೆ.
ನಿರೀಕ್ಷಾ ಶೆಟ್ಟಿ, ಹಾಗೂ ಸ್ಮೃತಿ ವೆಂಕಟೇಶ್ ಮಾತನಾಡಿದರು. ಮೂಲತಃ ಕಾರ್ಕಳದವರಾದ ನಾಗರಾಜ್ ಶಂಕರ್ ಕಥೆ, ಚಿತ್ರಕಥೆ, ಸಂಭಾಷಣೆ,ನಿರ್ದೇಶನ, ಮುದೇಗೌಡ್ರು ನವೀನ ಕುಮಾರ್, ತೆಲಿಗಿ ಮಲ್ಲಿಕಾರ್ಜುನಪ್ಪ ನಿರ್ಮಾಣದಲ್ಲಿ ಈ ಚಿತ್ರ ಮೂಡಿ ಬಂದಿದೆ. ಸಂಗೀತ ವಿನು ಮನಸು, ಛಾಯಾಗ್ರಾಹನಾ ಹಾಲೇಶ್ ಎಸ್, ಸಂಕಲನ ಹರೀಶ್ ಕೊಮ್ಮೆ, ನೃತ್ಯ ನಿರ್ದೇಶನ ಹೈಟ್ ಮಂಜು ಇವರೆಲ್ಲರ ಸಮಾಗಮದಲ್ಲಿ ಮೂಡಿಬರುತ್ತಿದೆ.
ಚಿತ್ರದಲ್ಲಿನ ಎದುರಿಗೆ ಬಂದರೆ ಹೃದಯಕೆ ತೊಂದರೆ, ಸುಳಿ ಮಿಂಚು, ಏನಿದೇನು ಈ ಕಂಪನ ಎಂಬ ಹಾಡುಗಳನ್ನು ಸಿನಿಮಾ ಪ್ರಿಯರನ್ನು ಸೆಳೆದಿವೆ. ಭಾರತಿ ಶೆಟ್ಟಿ, ಮೋಹಿನಿ ನಾಯಕ್, ಗೀತಾಂಜಲಿ ಎಂ ಸುವರ್ಣ, ರೋಹನ್, ಆಶಿತ್ ಸುಬ್ರಹ್ಮಣ್ಯ, ವಿಜಯ ಕುಮಾರ್ ಸೇರಿದಂತೆ ಹಲವರು ಈ ವೇಳೆ ಹಾಜರಿದ್ದರು.



















