ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡ ಭಾರತೀಯ ಮಹಿಳಾ ತಂಡದ ಮುಂದಿನ ಪ್ರವಾಸದ ವೇಳಾಪಟ್ಟಿ ಪ್ರಕಟವಾಗಿದೆ.
ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧ ನಡೆದಿದ್ದ ಟೂರ್ನಿಯನ್ನು ಭಾರತೀಯ ಮಹಿಳಾ ತಂಡ 3-0 ಅಂತರದಿಂದ ಸೋತಿದೆ. ಇದರ ಬೆನ್ನಲ್ಲೇ ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡ ಸೆಣಸಾಟ ನಡೆಸಲಿದೆ. ಮೊದಲಿಗೆ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಆನಂತರ ಏಕದಿನ ಸರಣಿ ನಡೆಯಲಿದೆ. ಈ ಸರಣಿಗಾಗಿ ಈಗಾಗಲೇ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ಬಾರಿ ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ.
ಭಾರತ ಹಾಗೂ ವೆಸ್ಟ್ ಇಂಡೀಸ್ ಮಹಿಳಾ ತಂಡಗಳ ನಡುವಿನ ಮೂರು ಪಂದ್ಯಗಳ ಟಿ-20 ಸರಣಿ ಡಿಸೆಂಬರ್ 15 ರಿಂದ ಆರಂಭವಾಗಲಿದೆ. ಟಿ20 ಸರಣಿಯ ಪ್ರತಿಯೊಂದು ಪಂದ್ಯವೂ ಸಂಜೆ 7ಕ್ಕೆ ಆರಂಭವಾಗಲಿದೆ.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಟಿ-20 ಸರಣಿಯು ಡಿಸೆಂಬರ್ 15 ರಿಂದ ಪ್ರಾರಂಭವಾಗಲಿದೆ. ಎರಡನೇ ಪಂದ್ಯ 17ರಂದು ಹಾಗೂ ಮೂರನೇ ಪಂದ್ಯ ಡಿಸೆಂಬರ್ 19ರಂದು ನಡೆಯಲಿದೆ. ಏಕದಿನ ಸರಣಿಯ ಮೊದಲ ಪಂದ್ಯ ಡಿ. 22 ರಂದು ನಡೆಯಲ್ಲಿದ್ದು, ಎರಡನೇ ಪಂದ್ಯ 24 ರಂದು ಮತ್ತು ಕೊನೆಯ ಪಂದ್ಯ ಡಿಸೆಂಬರ್ 27 ರಂದು ನಡೆಯಲಿದೆ.
ಭಾರತೀಯ ತಂಡದಲ್ಲಿ ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ನಂದಿನಿ ಕಶ್ಯಪ್, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೆಟ್-ಕೀಪರ್), ಉಮಾ ಚೆಟ್ರಿ (ವಿಕೆಟ್-ಕೀಪರ್), ದೀಪ್ತಿ ಶರ್ಮಾ, ಸಜೀವನ್ ಸಜನ, ರಾಘ್ವಿ ಬಿಸ್ತ್, ರೇಣುಕಾ ಠಾಕೂರ್, ಪ್ರಿಯಾ ಮಿಶ್ರಾ, ಟಿಟಾಸ್ ಸಾಧು, ಸೈಮಾ ಠಾಕೋರ್, ಮಿನ್ನು ಮಣಿ, ರಾಧಾ ಯಾದವ್ ಇದ್ದಾರೆ.