ಬೆಂಗಳೂರು : ಯಾರ ಮನಸ್ಸಿಗೂ ನೋಯಿಸಲು ನನಗೆ ಇಷ್ಟವಿಲ್ಲ. ನನ್ನ ಜೀವನ ನಿಮ್ಮ ಜೀವನದ ಮೆಟ್ಟಿಲುಗಳಾಗಬೇಕು ಎಂದುಕೊಂಡವನು ನಾನು. ಯಾರಿಗಾದ್ರೂ ಇದರಿಂದ ನೋವಾಗಿದ್ದರೆ ನಾನು ಕ್ಷಮಾಪಣೆ ಕೇಳಲು ಸಿದ್ದ. ನನ್ನ ಮಾತಿನ ಬಗ್ಗೆ ಯಾರು ಪ್ರಶ್ನೆ ಮಾಡಿದ್ದಾರೋ ಅವರೆಲ್ಲರೂ ಮೂರ್ಖರು ಎನ್ನುತ್ತಾ ಸ್ವಪಕ್ಷದವರ ವಿರುದ್ಧ ಡಿಸಿಎಂ ಡಿಕೆಶಿ ಗುಡುಗಿದ್ದಾರೆ.
ಡಿಸಿಎಂ ಡಿಕೆಶಿ ಸದನದಲ್ಲಿ ಆರ್.ಎಸ್.ಎಸ್ ಗೀತೆ ಹಾಡಿದ್ದು ಕಾಂಗ್ರೆಸ್ ಪಕ್ಷದೊಳಗೆಯೇ ಒಂದಿಷ್ಟು ವಿವಾದವಾಗಿತ್ತು. ರಾಜಕೀಯ ವಲಯದಲ್ಲಿ ಡಿಕೆಶಿ ಈ ನಡೆಗೆ ಬೇರೆಯದ್ದೇ ಆದ ಹೊಸ ವ್ಯಾಖ್ಯಾನ ಪಡೆದುಕೊಂಡಿತ್ತು.
ಇನ್ನು, ಮಾಜಿ ಸಚಿವ ರಾಜಣ್ಣ ಅವರ “ವರು(ಡಿಕೆಶಿ) ಏನು ಬೇಕಾದರೂ ಮಾಡಬಹುದು” ಹೇಳಿಕೆಗೆ ಡಿಕೆಶಿ ತಿರುಗೇಟು ನೀಡಿದರು. “ಅವರು ಯಾರಿಗೆ ಸಲಹೆ ಮಾಡಬೇಕೋ ಅವರಿಗೆ ನೀಡಲಿ. ನನಗೇನು ಹೇಳಬೇಕಿಲ್ಲ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಡಿಸಿಎಂ ಡಿಕೆ ಶಿವಕುಮಾರ್, ನಾನು ಅಸೆಂಬ್ಲಿಯಲ್ಲಿ ಬಿಜೆಪಿಯವರು ಮಾತಾನಾಡುತ್ತಿದ್ದ ಸಂದರ್ಭದಲ್ಲಿ ಆರ್ಆರ್ಆರ್ ಗೀತೆ ಹಾಡಿದೆ. ಅವರೆಲ್ಲರೂ ಅವರ ಪಕ್ಷವೇ, ವಿರೋಧ ಪಕ್ಷದ ಅರಿವು ನನಗಿದೆ ಎಂದು ನಾನು ಕಾಲೆಳೆದಿದ್ದೆ. ಇದೇನು ಹೊಸದೇನು ಅಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆ, ಸಂಸದೀಯ ವ್ಯವಸ್ಥೆಯಲ್ಲಿ ನನ್ನ ಆಚಾರ ವಿಚಾರ ಮಾತಾಡಿದ್ದೇನೆ ಎಂದು ಡಿಕೆಶಿ ಹೇಳಿದ್ದಾರೆ.
ಇನ್ನು, 1979ರಿಂದ ನಾನು ವಿದ್ಯಾರ್ಥಿ ಸಂಘಟನೆಯಲ್ಲಿ ಕೆಲಸ ಮಾಡುತ್ತಾ ಗುರುತಿಸಿಕೊಂಡವನು. ನಾನು ಯಾರಿಂದಲೂ ಪಾಠ ಕಲಿಯುವ ಅವಶ್ಯಕತೆ ಇಲ್ಲ. ನನಗೂ ಗಾಂಧಿ ಕುಟುಂಬಕ್ಕೂ ಇರುವುದು ಭಕ್ತನಿಗೂ ಭಗವಂತನಿಗೂ ಇರುವ ಸಂಬಂಧ. ಅವರ ತ್ಯಾಗ್ಯದ ಬಲಿದಾನ, ಆಶೀರ್ವಾದ ಮಾರ್ಗದರ್ಶನ ಪಡೆದು ರಾಜಕಾರಣ ಮಾಡಿಕೊಂಡು ಬಂದಿದ್ದೇನೆ ಎಂದು ಡಿಕೆಶಿ ಗುಡುಗಿದ್ದಾರೆ.


















