ಗದಗ : “ಅರಸನ ಅರಮನೆಗೆ ಕಾರ್ಮೋಡ ಕವಿದೀತು” ಎಂದು ಎರಡು ತಿಂಗಳ ಹಿಂದೆ ಹೇಳಿದ್ದೆ. ಕೇಂದ್ರ ಹಾಗೂ ರಾಜ್ಯಕ್ಕೆ ಅನ್ವಯಿಸುತ್ತೆ ಎಂದು ಹೇಳಿದ್ದೆ. ಕೇಂದ್ರದಲ್ಲಿ ಉಪ ರಾಷ್ಟ್ರಪತಿ ರಾಜೀನಾಮೆ ನೀಡಿದರು, ರಾಜ್ಯದಲ್ಲಿ ಕೆ ಎನ್ ರಾಜಣ್ಣ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು ಎಂದು ತಾವು ನುಡಿದ ಭವಿಷ್ಯವನ್ನು ಕೋಡಿ ಮಠದ ಸ್ವಾಮೀಜಿ ಸಮರ್ಥಿಸಿಕೊಂಡಿದ್ದಾರೆ.
ಗದಗದಲ್ಲಿ ಮಾತನಾಡಿದ ಅವರು, ನಾವು ಯುಗಾದಿ ಹಾಗೂ ಸಂಕ್ರಾಂತಿ ಭವಿಷ್ಯ ಹೇಳುವುದಾಗಿ ಎಂದ ಅವರು, ರಾಜಕೀಯದಲ್ಲಿ ಕಾರ್ಮೋಡ ಮುಂದುವರಿಯುತ್ತದೆ ಎಂದಿದ್ದಾರೆ.
ಧರ್ಮಸ್ಥಳದ ವಿಚಾರವಾಗಿ ಮಾತನಾಡಿದ ಶ್ರೀಗಳು, ಸಮಾಚಾರ, ಪ್ರಚಾರ, ವಿಚಾರ, ಅಪಪ್ರಚಾರ ಇದರಲ್ಲಿ ಪ್ರಭಲವಾದದ್ದು ಅಪಪ್ರಚಾರ. ದುರ್ಧೈವ ಇದರಲ್ಲಿ ಅಪಪ್ರಚಾರ ಮೊದಲು ಬಂದಿದೆ. “ಸತ್ಯ ಹೊರಬರುವುದರೊಳಗೆ ಆತ ಸತ್ತೇ ಹೊಗುತ್ತಾನೆ”. ಅಳಕು ಹೃದಯದವನಿಗೆ ಅಪಪ್ರಚಾರವೇ ಆಯುಧ, ಸತ್ಯ ಬರುವವರಿಗೆ ಕಾದು ನೋಡಬೇಕು, “ಒಳ್ಳೊಳ್ಳೆ ದೇವರ ಗುಡಿಗಳ ಪೂಜೆ ನಿಲ್ಲುತ್ತಾ ಬರುತ್ತವೆ ನೋಡಿರಿ” ಎಂದಿದ್ದಲ್ಲದೇ, “ಹಣೆಗೆ ವಿಭೂತಿ ಇಟ್ಟು ಹಣೆ ಕೆತ್ತಿಸ್ಯಾರು, ನಾಮ ಇಟ್ರು ಅಳಿಸ್ಯಾರು” ಎಂದು ಮಾರ್ಮಿಕವಾಗಿ ಭವಿಷ್ಯ ನುಡಿದಿದ್ದಲ್ಲದೇ, ಇವು ಕಾಲಜ್ಞಾನದಲ್ಲಿ ಬರುತ್ತೇವೆ, ಧರ್ಮಕ್ಕೆ ಅವಹೇಳನ ಮಾಡುವ ಕಾಲ ಬರುತ್ತಿವೆ ಎಂದು ಆತಂಕದ ಭವಿಷ್ಯ ನುಡಿದಿದ್ದಾರೆ.



















