ಕಲಬುರಗಿ: ಶೃಂಗೇರಿ ಮಠದ ಆಸ್ತಿ ವಕ್ಫ್ ಗೆ ಸೇರಿಲ್ಲ. ಅದು ವಕ್ಫ್ ಗೆ ಸೇರಿದ್ದು ಎಂದು ಎಲ್ಲಿಯೂ ಹೇಳಿಲ್ಲ ಎಂದು ಟಿಪ್ಪು ಸುಲ್ತಾನ್ ವಂಶಸ್ಥ ಸಾಹೇಬ್ ದಾದಾ ಮನ್ಸೂರ್ ಅಲಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೃಂಗೇರಿ ಮಠದ ಆಸ್ತಿ ವಕ್ಫ್ ಆಸ್ತಿ ಅಂತಾ ಎಲ್ಲೂ ಹೇಳಿಲ್ಲ. ಈ ಬಗ್ಗೆ ಪತ್ರವೂ ಇಲ್ಲ. ಟಿಪ್ಪು ಸುಲ್ತಾನ್ ಈ ಕುರಿತು ಹೇಳಿಲ್ಲ. ಅದು ಮಠದ ಆಸ್ತಿ, ಹಿಂದು ಧರ್ಮದ ಆಸ್ತಿ. ಅದನ್ನ ಟಿಪ್ಪು ಸುಲ್ತಾನ್ ಅದನ್ನ ರಕ್ಷಣೆ ಮಾಡಿದ್ದರು. ಶೃಂಗೇರಿ ಮಠ ಒಡೆದು ಹಾಕಿದಾಗ ಟಿಪ್ಪು ಸುಲ್ತಾನ್ ಸಿಪಾಯಿಗಳನ್ನ ಕಳುಹಿಸಿ ರಕ್ಷಣೆ ಮಾಡಿ ರೀ ಕನ್ಸಟ್ರಕ್ಷನ್ ಮಾಡಿದ್ದರು ಎಂದು ಹೇಳಿದ್ದಾರೆ.
ದೊಡ್ಡಬಳ್ಳಾಪುರ ನರಸಿಂಹ ಸ್ವಾಮಿ ದೇವಸ್ಥಾನ, ಚಾಮುಂಡೇಶ್ವರಿ ದೇವಸ್ಥಾನ, ನಂಜುಡೇ ಸ್ವಾಮಿ ದೇವಸ್ಥಾನ ಸೇರಿದಂತೆ ಸಾಕಷ್ಟು ದೇವಸ್ಥಾನಗಳಿಗೆ ಜಮೀನು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.