ನವದೆಹಲಿ: ಹರಿಯಾಣದಲ್ಲಿ ಬಿಜೆಪಿಯು ನಿರೀಕ್ಷೆ ಮೀರಿ ಗೆಲುವು ಸಾಧಿಸಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ರಾಜಕೀಯದ ಗೆಲುವು ಎಂದು ಬಣ್ಣಿಸಿದ್ದಾರೆ.
ನವರಾತ್ರಿಯ ಆರನೇ ದಿನ. ಮಾತಾ ಕಾತ್ಯಾಯನಿಯ ದಿನ. ಮಾತಾ ಕಾತ್ಯಾಯನಿ ಕೈಯಲ್ಲಿ ಕಮಲ ಹಿಡಿದು ಸಿಂಹದ ಮೇಲೆ ಕುಳಿತಿದ್ದಾಳೆ. ಅವಳು ನಮ್ಮೆಲ್ಲರನ್ನು ಇಂದು ಆಶೀರ್ವದಿಸುತ್ತಿದ್ದಾಳೆ. ಇಂತಹ ಪವಿತ್ರ ದಿನದಂದು ಹರಿಯಾಣದಲ್ಲಿ ಮೂರನೇ ಬಾರಿಗೆ ಕಮಲ ಅರಳಿದ್ದು, ಸಂತಸ ತಂದಿದೆ. ಈ ಗೆಲುವು ದೇಶಾದ್ಯಂತ ಪ್ರತಿಧ್ವನಿಸಲಿ ಎಂದು ಹೇಳಿದ್ದಾರೆ.
ಹರಿಯಾಣದ ಜನತೆ ಇಂದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ.ಹರಿಯಾಣ ಇಲ್ಲಿಯವರೆಗೆ 13 ಚುನಾವಣೆಗಳನ್ನು ಕಂಡಿದೆ. 10 ಬಾರಿ ಸರ್ಕಾರ ಬದಲಾಯಿತು. 2 ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ಸರ್ಕಾರಕ್ಕೆ ಮತ್ತೊಂದು ಅವಕಾಶ ನೀಡಿದ್ದು, ಹರಿಯಾಣ ಜನರು ಬಯಸುತ್ತಿರುವ ಅಭಿವೃದ್ಧಿಗೆ. ಅವರ ನಂಬಿಕೆಗೆ ತಕ್ಕಂತೆ ಬಿಜೆಪಿ ರಾಜ್ಯವನ್ನು ಅಭಿವೃದ್ಧಿ ಮಾಡುತ್ತಿದೆ ಎಂದಿದ್ದಾರೆ.