ಡೆಹ್ರಾಡೂನ್: ವೈದ್ಯೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ನರ್ಸಿಂಗ್ ಅಧಿಕಾರಿಯನ್ನು ಬಂಧಿಸಲು ಪೊಲೀಸ್ (Police) ಅಧಿಕಾರಿಗಳು ಜೀಪ್ ನ್ನು ಏಮ್ಸ್ (AIIMS) ಆಸ್ಪತ್ರೆಗೆ ನುಗ್ಗಿಸಿರುವ ಘಟನೆ ನಡೆದಿದೆ.
ಈ ಘಟನೆ ಡೆಹ್ರಾಡೂನ್ ನ ಋಷಿಕೇಶದಲ್ಲಿ (Rishikesh) ನಡೆದಿದೆ. ಏಮ್ಸ್ ತುರ್ತು ಚಿಕಿತ್ಸಾ ವಾರ್ಡ್ ಮೂಲಕ ವಾಹನ ಸಂಚರಿಸಿದ್ದು ಸಾಮಾಜಿಕ ಜಾಲತಾಣದಲ್ಲಿ (Social Media) ವಿಡಿಯೋ ವೈರಲ್ (Video Viral) ಆಗಿದೆ. ನರ್ಸಿಂಗ್ ಅಧಿಕಾರಿ ಸತೀಶ್ ಕುಮಾರ್ ಮಹಿಳಾ ವೈದ್ಯೆಯೊಬ್ಬರನ್ನು ಶಸ್ತ್ರಚಿಕಿತ್ಸಾ ಕೊಠಡಿಯೊಳಗೆ ಲೈಂಗಿಕವಾಗಿ ನಿಂದಿಸಿರುವ ಆರೋಪ ಕೇಳಿ ಬಂದಿತ್ತು.
ಈ ಪ್ರಕರಣದ ಹಿನ್ನೆಲೆಯಲ್ಲಿ ಸೇವೆಯಿಂದಲೇ ವಜಾಗೊಳಿಸುವಂತೆ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ. ಆತನನ್ನು ಬಂಧಿಸಿ ಕರೆ ತರುತ್ತಿದ್ದಾಗ ಪ್ರತಿಭಟನಕಾರರು ಪೊಲೀಸ್ ವಾಹನವನ್ನು ಸುತ್ತುವರಿದು ಆತನನನ್ನು ಕೂಡಲೇ ಸೇವೆಯಿಂದಲೇ ತೆಗೆದು ಹಾಕುವಂತೆ ಒತ್ತಾಯಿಸಿದ್ದಾರೆ. ರಕ್ಷಣೆಯ ಹಿನ್ನೆಲೆಯಲ್ಲಿ ಪೊಲೀಸರು ಆಸ್ಪತ್ರೆಯೊಳಗೆ ಜೀಪ್ ನುಗ್ಗಿಸಿದ್ದಾರೆ ಎನ್ನಲಾಗಿದೆ.