ಬೆಂಗಳೂರು: ಕಾಂಗ್ರೆಸ್ ಯುವ ನಾಯಕಿಗೆ ವ್ಯಕ್ತಿಯೊಬ್ಬ ಕಾರಿನಲ್ಲಿ ಹೊರಟಾಗ ಅಶ್ಲೀಲ ಸನ್ನೆ ತೋರಿಸಿರುವ ಘಟನೆಯೊಂದು ನಡೆದಿದೆ.
ಅಶ್ಲೀಲ ಸಿಂಬಲ್ ತೋರಿಸಿ ಕಾರು ಚಾಲಕ ಕಿರಿಕ್ ಮಾಡಿದ್ದಾನೆ. ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಕ್ಷತಾ ರವಿಕುಮಾರ್ ಗೆ ಕಾರು ಚಾಲಕನೊಬ್ಬ ಅಶ್ಲೀಲ ಸನ್ನೆ ತೋರಿಸಿದ್ದಾನೆ.
ಈ ಘಟನೆ ಬೆಂಗಳೂರಿನ ಗೋಪಾಲನ್ ಮಾಲ್ ಹತ್ತಿರ ನಡೆದಿದೆ. ನಿನ್ನೆ ಸಂಜೆ 4 ಗಂಟೆಯ ವೇಳೆ ಈ ಘಟನೆ ನಡೆದಿದೆ. ಈ ಘಟನೆ ಕುರಿತು ಚಾಮರಾಜಪೇಟೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕಾರು ಚಾಲಕ ಟ್ರಾಫಿಕ್ ರೂಲ್ಸ್ ಫಾಲೋ ಮಾಡದೆ ಕಾರು ಚಲಾಯಿಸುತ್ತಿದ್ದ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ KA41 M4191 ನಂಬರ್ ನ ಕಾರು ಚಾಲಕ ಅಶ್ಲೀಲ ಸನ್ನೆ ತೋರಿಸಿ ಹೋಗಿದ್ದಾನೆ.