ವಿಜಯಪುರ: ಯಾರೋ ದುಷ್ಕರ್ಮಿಗಳು ನವಜಾತ ಶಿಶುವನ್ನು ಮನೆಯ ಹತ್ತಿರ ಇಟ್ಟು ಪರಾರಿಯಾಗಿರುವ ಘಟನೆ ನಡೆದಿದೆ.
ಈ ಘಟನೆ ವಿಜಯಪುರ (Vijayapura) ಚಾಲುಕ್ಯನಗರದಲ್ಲಿ ನಡೆದಿದೆ. ರಾಮಕೃಷ್ಣ ಆಸ್ಪತ್ರೆಯ ಹಿಂಬದಿಯ ಬಿ.ಜಿ ಪೊಲೀಸ್ (BG Police) ಪಾಟೀಲ ಎಂಬುವವರ ಮನೆಯ ಮುಂದೆ ಯಾರೋ ಮಗುವನ್ನು ಇಟ್ಟು ಪರಾರಿಯಾಗಿದ್ದಾರೆ.
ಆಸ್ಪತ್ರೆಯಲ್ಲಿ ಹೆರಿಗೆಯಾಗಿರುವ ಕ್ಲಿಪ್ ಜೊತೆಯಲ್ಲಿ ಮಗುವನ್ನು ಇಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಸಾವನ್ನಪ್ಪಿರುವ ಗಂಡು ಮಗು ಇದಾಗಿದೆ. ಮಗುವಿನ ದೇಹದ ಮೇಲೆ ಕಪ್ಪು ಕಪ್ಪು ಕಲೆಗಳು ಕಂಡುಬಂದಿವೆ.
ಈ ಮನೆಯಲ್ಲಿ ವಿದ್ಯಾರ್ಥಿನಿಯರು (Students) ಬಾಡಿಗೆಗೆ ಇದ್ದರು ಎನ್ನಲಾಗಿದೆ. ಅವರು ಬೆಳಿಗ್ಗೆ ಬಾಗಿಲು ತೆರೆದು ನೋಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.