ಬಳ್ಳಾರಿ: ಆಟೋದ ಎಕ್ಸೆಲ್ ತುಂಡಾಗಿ ಪಲ್ಟಿಯಾದ ಪರಿಣಾಮ ಓರ್ವ ಪ್ರಯಾಣಿಕ ಸಾವನ್ನಪ್ಪಿರುವ(death) ಘಟನೆ ನಡೆದಿದೆ.
ಕಂಪ್ಲಿಯ (Kampli) ತುಂಗಭದ್ರಾ ಸೇತುವೆ (Tungabhadra Bridge) ಮೇಲೆ ಈ ಘಟನೆ ನಡೆದಿದೆ. ಕಂಪ್ಲಿಯ ಎನ್.ಆಸ್ಲಾಂ(24) ಸಾವನ್ನಪ್ಪಿದ ಯುವಕ. ಗಂಗಾವತಿಯಿಂದ ಕಂಪ್ಲಿಗೆ ಆಟೋ ತೆರಳುತ್ತಿತ್ತು. ಈ ವೇಳೆ ತುಂಗಭದ್ರಾ ನದಿ ಸೇತುವೆ ಮೇಲೆ ಬರುತ್ತಿದ್ದಾಗ ಆಟೋದ ಎಕ್ಸೆಲ್ ತುಂಡಾಗಿದೆ.
ಪರಿಣಾಮ ಆಟೋ ನಿಯಂತ್ರಣ ತಪ್ಪಿ ನೆಲಕ್ಕೆ ವಾಲಿದೆ. ಆಗ ಪ್ರಯಾಣಿಕರು ಕೆಳಗೆ ಬಿದ್ದಿದ್ದಾರೆ. ಎನ್.ಆಸ್ಲಾಂ ತಲೆಗೆ ಗಂಭೀರವಾಗಿ ಗಾಯವಾಗಿದೆ. ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ವೃದ್ಧೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಲವರು ಚಿಕಿತ್ಸೆ ಪಡೆಯುತ್ತಿದ್ದಾರೆ.