ವಿಜಯಪುರ: ಜಿಲ್ಲೆಯಲ್ಲಿ ಅಮಾನುಷ ಘಟನೆಯೊಂದು ನಡೆದಿದ್ದು, ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ.
ನಗರದ ಸಿಂಧಗಿ ರಸ್ತೆಯಲ್ಲಿರುವ ಇಟ್ಟಂಗಿ ಭಟ್ಟಿ ಮಾಲೀಕ ಖೇಮು ರಾಠೋಡ (Khemu Rathoda) ಎಂಬಾತ ಕಾರ್ಮಿಕರ ಮೇಲೆ ಪೈಶಾಚಿಕ ಕೃತ್ಯ ನಡೆಸಿದ್ದಾನೆ. ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಹಬ್ಬಕ್ಕೆಂದು ಹೋಗಿ ತಡವಾಗಿ ಬಂದಿದ್ದಕ್ಕೆ ಪೈಪ್ ಗಳಿಂದ ಮನಬಂದಂತೆ ಥಳಿಸಿದ್ದಾನೆ.
ರಾಕ್ಷಸನಂತೆ ಅವರ ಅಂಗಲುಗಳಿಗೆ ಮನಸೋ ಇಚ್ಛೆ ಹೊಡೆದಿದ್ದಾನೆ. ಈ ದೃಶ್ಯ ವೈರಲ್ ಆಗಿದ್ದು ಆಕ್ರೋಶ ವ್ಯಕ್ತವಾಗುತ್ತಿದೆ. ಸದಾಶಿವ ಮಾದರ್, ಸದಾಶಿವ ಬಬಲಾದಿ, ಉಮೇಶ ಮಾದರ್ ಎಂಬ ಕಾರ್ಮಿಕರು ಹಲ್ಲೆಗೆ ಒಳಗಾಗಿದ್ದಾರೆ. ಅಡ್ವಾನ್ಸ್ ಹಣ ಪಡೆದು ಹೇಳಿದ ಸಮಯಕ್ಕೆ ಬಂದಿಲ್ಲ ಎದು ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.