ಮಂಡ್ಯದಲ್ಲಿ ಮನೆಗಳ್ಳರ ಹಾವಳಿ ಹೆಚ್ಚಾಗಿದ್ದು, ಜನರು ಕಂಗಾಲಾಗಿದ್ದಾರೆ.
ಮಂಡ್ಯದ ಬೂದನೂರು ಗ್ರಾಮದಲ್ಲಿ ಒಂಟಿ ಮನೆಯನ್ನೇ ಟಾರ್ಗೆಟ್ ಮಾಡಿ ಖದೀಮರು ಕಳ್ಳತನ ಮಾಡುತ್ತಿದ್ದಾರೆ. ಮಂಡ್ಯದ ಬೂದನೂರು ಗ್ರಾಮದಲ್ಲಿ ಒಂಟಿಯಾಗಿ ಬಂದ ಯುವಕನೋರ್ವ ಮನೆಗಳ್ಳತನಕ್ಕೆ ಯತ್ನಿಸಿದ್ದಾನೆ. ಈ ವೇಳೆ ಶಬ್ದ ಕೇಳಿ ಪಕ್ಕದ ಮನೆಯವರು ಎಚ್ಚರಗೊಂಡು ಹೊರ ಬಂದಿದ್ದಾರೆ. ಸ್ಥಳೀಯರನ್ನು ನೋಡುತ್ತಿದ್ದಂತೆ ಖದೀಮರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಸದ್ಯ ಸಿಸಿಟಿವಿಯಲ್ಲಿ ಮನೆಗಳ್ಳನ ವಿಫಲ ಯತ್ನದ ಕೃತ್ಯ ಸೆರೆಯಾಗಿದ್ದು, ಮಂಡ್ಯ ಗ್ರಾಮಾಂತರ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.



















