ಯಾದಗಿರಿ : ಕಸ ಬಿಸಾಡುವ ಜಾಗದಲ್ಲಿ ನವಜಾತ ಗಂಡು ಶಿಶುವೊಂದು ಪತ್ತೆಯಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಗುರಮಠಕಲ್ ಪಟ್ಟಣದ ಉಪ್ಪರಗಡ್ಡಾ ಬಡಾವಣೆಯಲ್ಲಿ ನಡೆದಿದೆ.
ಕಸದ ರಾಶಿಯಲ್ಲಿ ಬಿದ್ದ ನವಜಾತ ಶಿಶುವನ್ನು ಕಂಡು ಸ್ಥಳೀಯರು ಆತಂಕಗೊಂಡಿದ್ದಾರೆ. ತಡರಾತ್ರಿ ಹುಟ್ಟಿದ ಕೂಡಲೇ ಮಗುವನ್ನ ದುರುಳರು ಕಸದ ರಾಶಿಗೆ ಬಿಸಾಡಿ ಹೋಗಿದ್ದಾರೆ ಎನ್ನಲಾಗಿದೆ.
ಇನ್ನು, ತಿಪ್ಪೆಯಲ್ಲಿ ಬಿದ್ದ ಮಗು ಸಾವನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳಕ್ಕೆ ಗುರುಮಿಠಕಲ್ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಘಟನಾ ಸಂಬಂಧ ಗುರುಮಿಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ನೇಪಾಳದ ಪ್ರಧಾನಿಯಾಗಿ ಮಾಜಿ ರ್‍ಯಾಪರ್ ಬಾಲೆನ್ ಶಾ ಪ್ರಮಾಣ ವಚನ ಸ್ವೀಕಾರ!


















