ದುಬೈ: ಆಸ್ಟ್ರೇಲಿಯಾ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯಲ್ಲಿ ಕಿಂಗ್ ಕೊಹ್ಲಿ ಅರ್ಧ ಶತಕದ ಆಟ ಪ್ರದರ್ಶಿಸಿ, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಮೂಲಕ ಕಿಂಗ್, ಕ್ರಿಕೆಟ್ ದೇವರ ದಾಖಲೆ ಮುರಿದಿದ್ದಾರೆ.
ಟೀಂ ಇಂಡಿಯಾವನ್ನು(Team India) ಐಸಿಸಿ ಚಾಂಪಿಯನ್ಸ್ ಟ್ರೋಫಿ (Champions Trophy) ಫೈನಲ್ ತಲುಪಿಸಿದ ವಿರಾಟ್ ಕೊಹ್ಲಿ (Virat Kohli) ಸಚಿನ್ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು (World Record) ಮುರಿದಿದ್ದಾರೆ.
ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 74ನೇ ಅರ್ಧಶತಕ ಸಿಡಿಸಿದರೆ ಐಸಿಸಿ ಆಯೋಜಿಸಿದ ಟೂರ್ನಿಯಲ್ಲಿ 24ನೇ ಅರ್ಧ ಶತಕ ಸಿಡಿಸಿದ್ದಾರೆ. ಹೀಗಾಗಿ ಐಸಿಸಿ ಆಯೋಜಿಸಿದ್ದ ಟೂರ್ನಿಯಲ್ಲಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಸಚಿನ್ (Sachin Tendulkar) ಪಾತ್ರವಾಗಿದ್ದರು. ತೆಂಡೂಲ್ಕರ್ 58 ಇನ್ನಿಂಗ್ಸ್‌ಗಳಿಂದ 23 ಅರ್ಧಶತಕ ಸಿಡಿಸಿದ್ದರು.
ಐಸಿಸಿ ಟೂರ್ನಿಯಲ್ಲಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಟಾಪ್ ಬ್ಯಾಟ್ಸ್‌ಮನ್‌ಗಳು
24 – ವಿರಾಟ್ ಕೊಹ್ಲಿ (53 ಇನ್ನಿಂಗ್ಸ್)
23 – ಸಚಿನ್ ತೆಂಡೂಲ್ಕರ್ (58 ಇನ್ನಿಂಗ್ಸ್)
18 – ರೋಹಿತ್ ಶರ್ಮಾ (42 ಇನ್ನಿಂಗ್ಸ್)
17 – ಕುಮಾರ್ ಸಂಗಕ್ಕಾರ (56 ಇನ್ನಿಂಗ್ಸ್)
16 – ರಿಕಿ ಪಾಂಟಿಂಗ್ (60 ಇನ್ನಿಂಗ್ಸ್)