ಬೆಂಗಳೂರು: ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ಆಡಳಿತ ಸದಸ್ಯರ ಹುದ್ದೆಗಳ ನೇಮಕಾಗಿಗೆ ರಾಜ್ಯ ಸರ್ಕಾರವು ನೋಟಿಫಿಕೇಶನ್ ಹೊರಡಿಸಿದೆ. ರಾಜ್ಯ ಆಡಳಿತ ನ್ಯಾಯಮಂಡಳಿಯಲ್ಲಿ ಖಾಲಿ ಇರುವ ಇಬ್ಬರು ಆಡಳಿತ ಸದಸ್ಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಏಪ್ರಿಲ್ 7 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಅರ್ಜಿ ಸಲ್ಲಿಸಲು ಅರ್ಹತೆಗಳು
- 50 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರಬೇಕು
- ಹುದ್ದೆಗೆ ಸೇರಿದವರಿಗೆ 2.25 ಲಕ್ಷ ರೂ.ವರೆಗೆ ಸಂಬಳ ಇರುತ್ತದೆ. ಭಾರತ ಸರ್ಕಾರದ ಗ್ರೂಪ್ -ಎ ಹುದ್ದೆ ಹೊಂದಿರುವ ಹಾಗೂ ಅದೇ ವೇತನವನ್ನು ಹೊಂದಿರುವ ಅಧಿಕಾರಿಗಳಿಗೆ ಲಭ್ಯವಾಗುವ ಭತ್ಯೆಗಳು ಹಾಗೂ ಸೌಲಭ್ಯಗಳನ್ನು ಪಡೆಯಲು ಸದಸ್ಯರು ಅರ್ಹರಾಗಿರುತ್ತಾರೆ.
- ಆಡಳಿತ ಸದಸ್ಯರಿಗೆ ಮನೆ ಬಾಡಿಗೆ ಭತ್ಯೆ, ಪ್ರಯಾಣ ಭತ್ಯೆ, ರಜೆ, ನಿವೃತ್ತಿ ವೇತನ ಸೇರಿ ಹಲವು ಸೌಲಭ್ಯಗಳು ಇರುತ್ತವೆ.
- ಸದಸ್ಯರಾಗಿ ಆಯ್ಕೆಯಾದವರು ನಾಲ್ಕು ವರ್ಷಗಳ ಅವಧಿ ಅಥವಾ ಅರವತ್ತೇಳು ವರ್ಷ ಪೂರೈಸುವವರೆಗೆ ಸೇವೆಯಲ್ಲಿ ಮುಂದುವರಿಯಬಹುದು.
ಖಾಲಿ ಹುದ್ದೆಯ ಸುತ್ತೋಲೆ ಹಾಗೂ ಅರ್ಜಿ ನಮೂನೆ ಮತ್ತು ಅರ್ಜಿದಾರನು ಸಲ್ಲಿಸಬೇಕಾದ ಘೋಷಣಾ ಪತ್ರದ ನಮೂನೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧಿಕೃತ ಜಾಲತಾಣವಾದ https://dpar.karnataka.gov.in ಗೆ ಭೇಟಿ ನೀಡಿ ಪಡೆಯಬಹುದಾಗಿದೆ.
ಭರ್ತಿ ಮಾಡಿದ ಅರ್ಜಿಯನ್ನು (ದ್ವಿ ಪ್ರತಿಯಲ್ಲಿ) ಅಗತ್ಯ ದಾಖಲೆಗಳೊಂದಿಗೆ (ಐದು ಪ್ರತಿಗಳಲ್ಲಿ) ಸರ್ಕಾರದ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಕೊಠಡಿ ಸಂಖ್ಯೆ. 246, 2ನೇ ಮಹಡಿ, ವಿಧಾನಸೌಧ, ಬೆಂಗಳೂರು-560001 ವಿಳಾಸಕ್ಕೆ ಸಲ್ಲಿಸಬೇಕು.