ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ ಕಳಪೆ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಕೆಟ್ಟ ಹಾಗೂ ಅವಮಾನಕರ ದಾಖಲೆಗಳನ್ನು ಬರೆದಿದೆ.
ಮೊದಲ ಇನಿಂಗ್ಸ್ನಲ್ಲಿ ಭಾರತ ತಂಡವು ಕೇವಲ 46 ರನ್ ಗಳಿಗೆ ಆಲೌಟ್ ಆಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿರುವ ಭಾರತ ತಂಡ 188 ಎಸೆತಗಳಲ್ಲಿ ಕೇವಲ 46 ರನ್ ಗಳಿಸಿ ಆಲೌಟ್ ಆಗಿದೆ. ಈ ಕೆಟ್ಟ ದಾಖಲೆ ಮಾಡುವುದರ ಮೂಲಕ ಹಲವು ಅಮಾನಕ್ಕೆ ಗುರಿಯಾಗಿದೆ.
ಭಾರತದಲ್ಲಿ ಟೀಮ್ ಇಂಡಿಯಾದ ಅತ್ಯಲ್ಪ ಮೊತ್ತ ಇದಾಗಿದೆ. ಇದಕ್ಕೂ ಮುನ್ನ 1987 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 75 ರನ್ ಗಳಿಗೆ ಭಾರತ ತಂಡ ಆಲೌಟ್ ಆಗಿತ್ತು. ಈಗ 46 ರನ್ ಗೆ ಆಲೌಟ್ ಆಗಿ ಭಾರತ ತಂಡ ಹಳೆಯ ದಾಖಲೆಯನ್ನು ಅಳಿಸಿದೆ. ಭಾರತೀಯ ಉಪಖಂಡದಲ್ಲಿ ಅತೀ ಕಡಿಮೆ ರನ್ ಗಳಿಸಿದ ಹೀನಾಯ ದಾಖಲೆ ಕೂಡ ಭಾರತದ ಪಾಲಿಗೆ ಬಂದಿದೆ. ಹಿಂದೆ ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನ್ 53 ರನ್ ಗಳಿಸಿತ್ತು. ಇದು ಅತ್ಯಲ್ಪ ರನ್ ಎಂಬ ಕೆಟ್ಟ ದಾಖಲೆ ಬರೆದಿತ್ತು. ಆದರೆ, ಈಗ ಭಾರತ ತಂಡ ಕೇವಲ 46 ರನ್ ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ದಾಖಲೆಯನ್ನು ತನ್ನ ಹೆಸರಿಗೆ ಬರೆಯಿಸಿಕೊಂಡಿದೆ.
ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಅತೀ ಕಡಿಮೆ ಸ್ಕೋರ್ ಗೆ ಸರ್ವಪತನ ಕಂಡ ಅನಗತ್ಯ ದಾಖಲೆ ಕೂಡ ಭಾರತದ ಪಾಲಾಗಿದೆ. 2021 ರಲ್ಲಿ ನ್ಯೂಜಿಲೆಂಡ್ ತಂಡವು 62 ರನ್ಗೆ ಆಲೌಟ್ ಆಗಿದ್ದು ಕಳಪೆ ಪ್ರದರ್ಶನವಾಗಿತ್ತು. ಈಗ 46 ರನ್ ಗಳಿಗೆ ಸರ್ವಪತನ ಕಂಡು ಟೀಮ್ ಇಂಡಿಯಾ ಭಾರೀ ಮುಖಭಂಗ ಅನುಭವಿಸಿದೆ.
78 ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ತಂಡವೊಂದು 50 ಕ್ಕಿಂತ ಕಡಿಮೆ ರನ್ ಗೆ ಆಲೌಟ್ ಆಗಿರುವುದು ಇದೇ ದಾಖಲೆಯಾಗಿದೆ. 1946 ರಲ್ಲಿ ನ್ಯೂಜಿಲೆಂಡ್ ವೆಲ್ಲಿಂಗ್ಟನ್ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ ಕೇವಲ 42 ರನ್ ಗಳಿಗೆ ಆಲೌಟ್ ಆಗಿತ್ತು.
25 ವರ್ಷಗಳ ನಂತರ ಭಾರತ ತಂಡದ ಐವರು ಟಾಪ್ ಬ್ಯಾಟ್ಸ್ ಮನ್ ಗಳು ತವರಿನಲ್ಲಿ ಖಾತೆ ತೆರೆಯದೆ ಔಟ್ ಆಗಿರುವ ದಾಖಲೆಯು ಭಾರತದ ಪಾಲಾಗಿದೆ. ಭಾರತದ ಪರ ವಿರಾಟ್ ಕೊಹ್ಲಿ, ಸರ್ಫರಾಝ್ ಖಾನ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಶೂನ್ಯಕ್ಕೆ ಔಟ್ ಆಗಿದ್ದಾರೆ.