ಬೆಂಗಳೂರು: ನಟಿ ರನ್ಯಾ ರಾವ್(Ranya Rao) ಚಿನ್ನದ ಸ್ಮಗ್ಲಿಂಗ್ ನಲ್ಲಿ ಜೈಲು ಸೇರಿದ್ದಾರೆ. ಈ ಕುರಿತು ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ತನಿಖೆ ನಡೆಸುತ್ತಿದೆ. ಅವರ ದುಬೈ (Dubai) ಟ್ರಾವೆಲ್ ಹಿಸ್ಟರಿ ಬೆಳಕಿಗೆ ಬಂದಿದೆ.
2023 ಜೂನ್ ನಂತರ ಒಟ್ಟು 52 ಬಾರಿ ದುಬೈ ಪ್ರಯಾಣದ ಪೈಕಿ 45 ಬಾರಿ ಒಂದೇ ದಿನದಲ್ಲಿ ದುಬೈಗೆ ತೆರಳಿ ಮರಳಿ ದೇಶಕ್ಕೆ ಬಂದಿದ್ದಾರೆ. ತಿಂಗಳಿಗೆ ಕನಿಷ್ಠ 3 ಬಾರಿ ದುಬೈ ವಿಮಾನ ಹತ್ತುತ್ತಿದ್ದ ರನ್ಯಾ ಕಳೆದ ಐದು ತಿಂಗಳಲ್ಲಿ 11 ಬಾರಿ ದುಬೈಗೆ ಹೋಗಿ ಬಂದಿದ್ದಾರೆ. ಹಾಗಾದರೆ ರನ್ಯಾ ಅಷ್ಟು ಬಾರಿ ಹೋಗಲು ಕಾರಣವೇನು? ಯಾವ ಕಾರಣಕ್ಕೆ ರನ್ಯಾ ದುಬೈಗೆ ಹೋಗುತ್ತಿದ್ದರು? ಒಂದೇ ದಿನದಲ್ಲಿ ಹೋಗಿ ಬಂದಿದ್ದೇಕೆ? ಎಂಬುವುದು ಚರ್ಚೆಯ ವಿಷಯವಾಗಿದೆ.